ಪ್ರತಿಯೊಬ್ಬ ಭಾರತೀಯನಿಗೂ ನೀವು ನಿಜವಾದ ಗೆಳೆಯ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಬುಧಾಬಿಯಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾದರು.

ಈ ವೇಳೆ ರಾಷ್ಟ್ರಪತಿ ಭವನವಾದ ಕಸ್ರ್-ಅಲ್-ವತಾನ್‌ಗೆ ಆಗಮಿಸಿದ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಿದರು. ಈ ಸ್ವಾಗತಕ್ಕಾಗಿ ಯುಎಇ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ, ನೀವು ನನಗೆ ನೀಡಿದ ಗೌರವ, ಸಹೋದತ್ವವು ತನ್ನ ಸಹೋದರನನ್ನು ಭೇಟಿಯಾದಂತಹ ಬಾಂಧವ್ಯಕ್ಕೆ ಇದಕ್ಕಿಂತ ಬೇರೆ ಪುರಾವೆಗಳಿಲ್ಲ ಎಂದು ಬಣ್ಣಸಿದರು.

ಅಬುಧಾಬಿಯಲ್ಲಿರಲು ಮತ್ತು ನಿಮ್ಮನ್ನು ಭೇಟಿಯಾಗಲು ನನಗೆ ಸಂತೋಷವಾಗಿದೆ. ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಬ್ಬ ಭಾರತೀಯನೂ ನಿಮ್ಮನ್ನು ನಿಜವಾದ ಗೆಳೆಯನಾಗಿ ನೋಡುತ್ತಾರೆ ಎಂದು ತಿಳಿಸಿದರು.

ಇಂದು ಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರವು ಶೇಕಡಾ 20 ರಷ್ಟು ಬೆಳೆದಿದೆ. ಎರಡೂ ದೇಶಗಳು $ 85 ಶತಕೋಟಿ ವ್ಯಾಪಾರವನ್ನು ಸಾಧಿಸಿವೆ ಮತ್ತು ಶೀಘ್ರದಲ್ಲೇ $ 100 ಶತಕೋಟಿ ಗುರಿಯನ್ನು ಸಾಧಿಸಲಿವೆ ಎಂದು ಪ್ರಧಾನಿ ಹೇಳಿದರು.

ಈ ಕ್ಷಣ ನಾವು (ಭಾರತ-ಯುಎಇ) ಮೂರು ತಿಂಗಳೊಳಗೆ ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ, ಅದು ನಿಮ್ಮ ಸಹಕಾರ ಮತ್ತು ಬದ್ಧತೆಯಿಂದ ಸಾಧ್ಯವಾಗಿದೆ. ನಾನು ಯುಎಇಯಲ್ಲಿ COP-28 ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇನೆ ಎಂದು ಮೋದಿ ಹೇಳಿದರು.

ಈ ವೇಳೆ ಭಾರತ ಮತ್ತು ಯುಎಇ ಅಧಿಕಾರಿಗಳು ಪ್ರಧಾನಿ ಮೋದಿ ಮತ್ತು ಅಲ್ ನಹ್ಯಾನ್ ಅವರ ಸಮ್ಮುಖದಲ್ಲಿ ಹಲವಾರು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ನಾವು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಉಭಯ ದೇಶಗಳ ಕರೆನ್ಸಿಗಳಲ್ಲಿ ವ್ಯಾಪಾರ ಇತ್ಯರ್ಥಕ್ಕೆ ಸಂಬಂಧಿಸಿದ ಇಂದಿನ ಒಪ್ಪಂದವು ನಮ್ಮ ಬಲವಾದ ಆರ್ಥಿಕ ಸಹಕಾರ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಯುಎಇ ಅಧ್ಯಕ್ಷರೊಂದಿಗಿನ ಭೇಟಿಯ ಮೊದಲು, ಪ್ರಧಾನಿ ಮೋದಿ ಯುಎನ್ ಹವಾಮಾನ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸುಲ್ತಾನ್ ಅಲ್ ಜಾಬರ್ ಅವರನ್ನು ಭೇಟಿಯಾದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಮುಂಬರುವ COP-28 ಕುರಿತು ಜಾಬರ್ ಪ್ರಧಾನಿಗೆ ವಿವರಿಸಿದರು. ಮಧ್ಯಪ್ರಾಚ್ಯ ರಾಷ್ಟ್ರದ COP-28 ಅಧ್ಯಕ್ಷ ಸ್ಥಾನಕ್ಕೆ ಭಾರತದ ಸಂಪೂರ್ಣ ಬೆಂಬಲವನ್ನು ಪ್ರಧಾನಿ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!