ಲಂಡನ್‌ ರೀಚ್‌ ಆದಮೇಲೆ ಕಾಲ್‌ ಮಾಡ್ತೀನಿ ಅಪ್ಪ.. ಕಡೆಗೂ ಕರೆ ಬರಲೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಹಿಂದೆ ಕಣ್ಣೀರು ತರಿಸುವ ಕಥೆಗಳಿವೆ. ಕುಟುಂಬದೊಂದಿಗೆ ಹೋದವರು, ಮಕ್ಕಳನ್ನು ಕಾಣಲು ಹೊರಟವರು, ಕನಸಿನೊಂದಿಗೆ ಹೋದವರ ಜೊತೆ ಡ್ಯೂಟಿ ಮಾಡುತ್ತಿದ್ದವರೂ ಇದ್ದರು!

ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.

अहमदाबाद विमान अपघात : हवाई सुंदरी होण्याचं स्वप्न झालं साकार मात्र विमान  अपघातात मैथिली पाटीलचा करुण अंतಮಹಾರಾಷ್ಟ್ರ ರಾಯಗಢ ಜಿಲ್ಲೆಯ ಪನ್ವೆಲ್‌ ಮೂಲದ ಏರ್ ಇಂಡಿಯಾ ಗಗನಸಖಿ ಮೈಥಿಲಿ ಪಾಟೀಲ್ 24 ವರ್ಷಕ್ಕೆ ದುರಂತ ಅಂತ್ಯ ಕಂಡಿದ್ದಾರೆ. ನಿನ್ನೆ ಬೆಳಗ್ಗೆ 11:30ರ ಹೊತ್ತಿಗೆ ಮೈಥಿಲಿ ಅಪ್ಪನೊಂದಿಗೆ ಕೊನೆಯದ್ದಾಗಿ ಮಾತನಾಡಿದ್ದಳು.

ಲಂಡನ್‌ಗೆ ತಲುಪಿದ ಕೂಡಲೇ ಕರೆ ಮಾಡುವುದಾಗಿ ತಿಳಿಸಿದ್ದಳು. ಆದರೆ ನಡೆದಿದ್ದೇ ಬೇರೆ, ಅಹಮದಾಬಾದ್‌ ಏರ್‌ಪೋರ್ಟ್‌ನಿಂದ ಟೇಕಾಫ್‌ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ಇದೇ ವಿಮಾನದಲ್ಲಿ ಗಗನ ಸಖಿಯಾಗಿದ್ದ ಮೈಥಿಲಿ ಬದುಕಿನ ದುರಂತ ಅಂತ್ಯ ಕಂಡರು. ಇದೀಗ ಮಗಳ ಕರೆಗಾಗಿ ಕಾಯುತ್ತಿದ್ದ ತಂದೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!