ಸಾಮಾಗ್ರಿಗಳು
ಹಸಿ ಮೆಣಸಿನಕಾಯಿ – 10 ರಿಂದ 12
ದೊಡ್ಡ ಗಾತ್ರದ ಈರುಳ್ಳಿ – 1
ಜೀರಿಗೆ – ಟೀಸ್ಪೂನ್
ಹುಣಸೆಹಣ್ಣು- ದೊಡ್ಡ ನಿಂಬೆಹಣ್ಣಿನ ಗಾತ್ರದಷ್ಟು
ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳು – 10
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ
ಒಂದು ನಿಂಬೆಹಣ್ಣಿನ ಗಾತ್ರದಷ್ಟು ಹುಣಸೆಹಣ್ಣನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಹಾಕಿ ನೆನೆಸಿಡಬೇಕು. ಬೆಳ್ಳುಳ್ಳಿ ಎಸಳುಗಳ ಸಿಪ್ಪೆ ಸುಲಿದು ಪಕ್ಕಕ್ಕೆ ಇಡಿ.
ದೊಡ್ಡ ಗಾತ್ರದ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಐದು ಇಲ್ಲವೇ ಆರು ದೊಡ್ಡ ಪೀಸ್ಗಳಾಗಿ ಕತ್ತರಿಸಿ. ನಂತರ ಇವೆಲ್ಲಾ ಪದಾರ್ಥಗಳಿಗೆ ಒಂದು ಟೀಸ್ಪೂನ್ ಜೀರಿಗೆ ಸೇರಿಸಿ. ಇವೆಲ್ಲನ್ನು ಕಲ್ಲಿನ ಒಳ್ಳಿನಲ್ಲಿ ಹಾಕಿ ನಿಧಾನವಾಗಿ ಅರಿಯಿರಿ.
ಬಳಿಕ ಈ ಮಿಶ್ರಣಕ್ಕೆ ನೆನೆಸಿದ ಹುಣಸೆಹಣ್ಣಿನ ರಸವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಎಲ್ಲವನ್ನೂ ಒಟ್ಟುಗೂಡಿಸಿ ಮತ್ತೊಮ್ಮೆ ಮಿಶ್ರಣ ಮಾಡಿ.
ಈಗ ಹಿಂದೆ ಕತ್ತರಿಸಿದ ಹಸಿಮೆಣಸಿನಕಾಯಿ ಪೀಸ್ಗಳನ್ನು ಸೇರಿಸಿ ಹಾಗೂ ಅವುಗಳನ್ನು ಒರಟಾದ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕಾಗುತ್ತದೆ. ಬಳಿಕ ಈರುಳ್ಳಿ ಪೀಸ್ಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಚಟ್ನಿ ಒರಟಾಗಿದ್ದರೆ ಮಾತ್ರ ಅದರಲ್ಲಿರುವ ಪದಾರ್ಥಗಳು ತಿಂದಾಗ ರುಚಿಕರವಾಗಿರುತ್ತವೆ. ಚಟ್ನಿಯನ್ನು ಹೀಗೆ ರುಬ್ಬಿಕೊಂಡ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈಗ ರುಚಿಕರವಾದ ಗ್ರಾಮೀಣ ಶೈಲಿಯ ಸಾಂಪ್ರದಾಯಿಕ ಚಟ್ನಿ ಸವಿಯಲು ಸಿದ್ಧವಾಗಿದೆ.