ಈ ಪದಾರ್ಥ ಇಲ್ಲದೆ ಅಡುಗೆ ಮಾಡೋದಕ್ಕೆ ಆಗೋದಿಲ್ಲ. ಪ್ರತಿ ಮನೆಯಲ್ಲಿಯೂ ಈ ವಸ್ತು ಇದ್ದೇ ಇದೆ. ದಿನವೂ, ಕೆಲವೊಮ್ಮೆ ಮೂರು ಹೊತ್ತು ಕೂಡ ಇದನ್ನು ಬಳಕೆ ಮಾಡ್ತೇವೆ. ಇದು ನಿಧಾನಕ್ಕೆ ನಮ್ಮ ದೇಹಕ್ಕೆ ಸೇರಿ ಎಲ್ಲ ರೀತಿ ಸಮಸ್ಯೆ ತರುತ್ತಿದೆ..
ಯಾವ ವಸ್ತು ಗೊತ್ತಾ? ಬೀಜಗಳ ಎಣ್ಣೆ! ಸೂರ್ಯಕಾಂತಿ ಬೀಜ, ಶೇಂಗಾ ಬೀಜ, ಸೋಯಾ ಕಾಳು ಹೀಗೆ ಕಾಳುಗಳ ಬೇಸ್ ಇರುವಂಥ ಎಣ್ಣೆಯನ್ನು ನಿತ್ಯವೂ ಬಳಸ್ತೇವೆ. ಇದು ರೀಫೈನ್ಡ್ ಆಯಿಲ್ ಅನ್ನೋದನ್ನು ಜನ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ಕೋಲ್ಡ್ ಪ್ರೆಸ್ಡ್ ಆಯಿಲ್‌ಗಳು ದುಬಾರಿಯಾದ್ದರಿಂದ ಜನ ರೀಫೈನ್ಡ್ ಆಯಿಲ್ ಮೊರೆ ಹೋಗುತ್ತಿದ್ದಾರೆ.
ಇದರಿಂದ ಏನಿದೆ ಸಮಸ್ಯೆ?
ಇದನ್ನು ರಿಫೈನ್ ಮಾಡೋದಕ್ಕೆ ನಿಕಲ್‌ನಂಥ ಕೆಮಿಕಲ್ ಬಳಕೆ ಮಾಡಿರುತ್ತಾರೆ.
ಹೆಚ್ಚು ದಿನ ಬಾಳಿಕೆ ಬರಲಿ ಎಂದು ಸಾಕಷ್ಟು ಪ್ರಿಸರ್ವೇಟೀವ್ಸ್ ಹಾಕಿರುತ್ತಾರೆ.
ಸೋಡಿಯಮ್ ಹೈಡ್ರೋಕ್ಸೈಡ್ ಇರುವುದರಿಂದ ಜೀರ್ಣಕ್ರಿಯೆ ಹಾಳಾಗುತ್ತದೆ.
ಬ್ಲೀಚಿಂಗ್ ಮಾಡಿರುತ್ತಾರೆ. ವಾಸನೆಗೆ ಕೆಮಿಕಲ್ ಹಾಕುತ್ತಾರೆ.
ಹೆಚ್ಚು ಟೆಂಪರೇಚರ್‌ನಲ್ಲಿ ಎಣ್ಣೆ ಟ್ರೀಟ್ ಮಾಡಿರುತ್ತಾರೆ.
ಕ್ಯಾನ್ಸರ್ ಸಾಧ್ಯತೆ ಇದೆ
ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮದಾಗುತ್ತವೆ.
ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ದೇಹದಲ್ಲಿ ಬೊಜ್ಜು ಬರುವಂತೆ ಮಾಡುತ್ತದೆ.