ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದರ್ ತೆರಸಾಗೆ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗಿದೆ. ಆದರೆ ತುಮಕೂರಿನ ಸಿದ್ದಗಂಗಾಶ್ರೀಗಳಿಗೆ ಯಾಕೇ ಇಲ್ಲಿಯ ತನಕ ನೀಡಿಲ್ಲ ಎಂದು ಖ್ಯಾತ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಪ್ರಶ್ನಿಸಿದರು.
ಮಂಗಳವಾರ ನಗರದ ಕಲಾಮಂದಿರದಲ್ಲಿ ಮೈಸೂರಿನ ವೀರಸಾರ್ವಕರ್ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮದರ್ ತೆರಸಾ ಅವರು, ಬೀದಿಯಲ್ಲಿದ್ದ ಅನಾಥ ಮಕ್ಕಳಿಗೆ ಆಶ್ರಯ ನೀಡಿ, ಅವರಿಗೆ ಶಿಕ್ಷಣ ಕೊಡಿಸಿ, ಕ್ರಿಶ್ಚಯನ್ ಆಗಿ ಬೆಳೆಸಿದರು. ಅಂತಹವರಿಗೆ ಮಹಾನ್ ಮಾನವತವಾದಿ, ಸೇವಕಿ ಮುಂತಾದ ಬಿರುದುಗಳಿಂದ ಕರೆದು ಅವರಿಗೆ ಕೇಂದ್ರ ಸರ್ಕಾರದಿಂದ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಯೂರೂಪ್‌ನಲ್ಲಿ ನೋಬಲ್ ಪ್ರಶಸ್ತಿಯನ್ನೂ ಕೂಡ ಕೊಟ್ಟಿದ್ದಾರೆ. ಆದರೆ ಕರ್ನಾಟಕ ರಾಜ್ಯದ ತುಮಕೂರುನಲ್ಲಿರುವ ಸಿದ್ದಗಂಗಾ ಮಠದಲ್ಲಿ ಶ್ರೀಗಳು 40ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರ, ಅನ್ನ, ಆರೋಗ್ಯ ನೀಡಿ ಬೆಳೆಸುತ್ತಿದ್ದರು. ಅವರಲ್ಲಿ ಮುಸ್ಲಿಂಮರು, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದ ಮಕ್ಕಳೂ ಇದ್ದಾರೆ. ಆದರೆ ಸಿದ್ದಗಂಗಾಶ್ರೀಗಳು ಎಂದಿಗೂ ಮಕ್ಕಳನ್ನೂ ಅವರ ಧರ್ಮದಿಂದ ಮತಾಂತರ ಮಾಡುವ ಪ್ರಯತ್ನವನ್ನು ಮಾಡಲಿಲ್ಲ. ಆದರೆ ಅವರ ಸೇವೆಯನ್ನು ಪರಿಗಣಿಸಿ ಯಾಕೇ ಇನ್ನೂ ಕೂಡ ಭಾರತ ರತ್ನ ಪ್ರಶಸ್ತಿಯನ್ನು ಕೊಟ್ಟಿಲ್ಲ. ಯಾಕೇ ಕೊಡುತ್ತಿಲ್ಲ ಎಂಬುದೇ ನನಗೆ ಅರ್ಥವಾಗದ ವಿಷಯವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವೀರಸಾರ್ವಕರ್ ಅವರನ್ನು ಮೈಲಿಗೆ ಎಂದು ದೂರವಿಟ್ಟಂತೆ ಸಿದ್ದಗಂಗಾ ಶ್ರೀಗಳನ್ನೂ ದೂರವಿಟ್ಟಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಸನ್ಯಾಸಿಗಳು ಯಾವುದೇ ಟೈಟಲ್‌ಗಳನ್ನು ತೆಗೆದುಕೊಳ್ಳಬಾರದು. ಧ್ಯಾನ, ಸಮಾಜ ಸೇವೆಯೇ ಅವರಿಗೆ ಮುಖ್ಯವಾಗಿರಬೇಕು. ಆದರೆ ಈಗಿನಲ್ಲಿ ಕೆಲವರು ತಮಗೆ ಡಾಕ್ಟರೇಟ್ ನೀಡಿ ಎಂದು ಕೇಳಿ ಪಡೆದುಕೊಳ್ಳುತ್ತಾರೆ. ತಮ್ಮ ಹೆಸರಿನ ಮುಂದೆಯೂ ಡಾಕ್ಟರೇಟ್ ಎಂದು ಹಾಕಿಸಿಕೊಳ್ಳುತ್ತಾರೆ ಎಂದರು.
ಸೋನಿಯಾಗಾಂಧಿಯವರು ಕಾಂಗ್ರೆಸ್‌ನಲ್ಲಿ ಮುಖ್ಯಸ್ಥೆಯಾದ ಬಳಿಕ ಕೇರಳ, ಆಂದ್ರಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಕ್ರಿಶ್ಚಿಯನ್ನರನ್ನೇ ಮುಖ್ಯಮಂತ್ರಿಗಳನ್ನಾಗಿ ಮಾಡಿದರು. ಅಲ್ಲದೇ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಯ ಮುಖ್ಯ ಸ್ಥಾನಗಳಿಗೆ ಕ್ರಿಶ್ಚಿಯನ್ ಅಧಿಕಾರಿಗಳನ್ನೇ ನೇಮಕ ಮಾಡಿದ್ದರು. ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಜಶೇಖರರೆಡ್ಡಿಯವರು ಆ ರಾಜ್ಯದಲ್ಲಿ ಹೆಚ್ಚಾಗಿ ಚರ್ಚ್ಗಳನ್ನು ನಿರ್ಮಿಸಿದರು. ತಿರುಪತಿಯಲ್ಲೂ ನಿರ್ಮಿಸಲು ಮುಂದಾದಾಗ ಎಲ್ಲಾ ಹಿಂದು ಧರ್ಮದ ಸ್ವಾಮೀಜಿಗಳು ಒಟ್ಟಾಗಿ ನಿಂತು ವಿರೋಧ ವ್ಯಕ್ತಪಡಿಸಿದಾಗ, ಚರ್ಚ್ ನಿರ್ಮಾಣ ನಿಂತು ಹೋಯಿತು. ಆದರೆ ತಿರುಪತಿ ಲಡ್ಡು ತಯಾರಿಕೆಯನ್ನು ಕೇರಳ ಕ್ರಿಶ್ಚಿಯನ್‌ಗೆ ಟೆಂಡರ್ ನೀಡಿದ್ದರು. ಆತ ತಯಾರಿಸಿದ ಲಡ್ಡುವನ್ನು ಹಿಂದೂಗಳು ಯಾರು ಮಾಡಿದ್ದರಂತೆ ದೇವರ ಪ್ರಸಾದ ಎಂದು ತಿನ್ನುತ್ತಿದ್ದರು ಎಂದರು.
ಮನಮೋಹನ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಸಂಪತ್ತಿನಲ್ಲಿ ಮುಸ್ಲಿಂಮರಿಗೂ ಭಾಗ ಸಿಗಬೇಕೆಂಬ ನಿಟ್ಟಿನಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ಇಲ್ಲಿಯ ತನಕ ದೇಶಕ್ಕೆ ತೆರಿಗೆಯನ್ನು ಕಟ್ಟುತ್ತಾ ಬರುತ್ತಿರುವವರು ಹಿಂದುಗಳು, ಆದರೆ ಮಜಾ ಮಾಡುತ್ತಿರುವವರು ಮಾತ್ರ ಮುಸ್ಲಿಂಮರು. ಮುಸ್ಲಿಮರು ಈ ದೇಶಕ್ಕೆ ಯಾವುದೇ ತೆರಿಗೆಯನ್ನು ಕಟ್ಟುತ್ತಿಲ್ಲ. ಆದರೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಅನುಭವಿಸುತ್ತಿದ್ದಾರೆ. ಇದು ನಿಜಕ್ಕೂ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಜಗತ್ತನ್ನು ಕ್ರಿಶ್ಚೀಕರಣ ಮಾಡಲು ಬಂದವರು ಅಮೇರಕಾ, ಆಫ್ರೀಕಾವನ್ನು ಮತಾಂತರಗೊಳಿಸಿದರು. ಅದೇ ರೀತಿ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ದೊಡ್ಡ ರಾಷ್ಟ್ರವಾಗಿರುವ ಭಾರತವನ್ನು ಸಂಪೂರ್ಣವಾಗಿ ಕ್ರಿಶ್ಚಿಯನ್ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ಮಾಡಿದರು. ಈಗಲೂ ನಡೆಯುತ್ತಿದೆ. ಈ ಬಗ್ಗೆ ಹಿಂದುಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.