ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಆಪರೇಷನ್ ಸಿಂದೂರ್ ಮತ್ತು ಆಪರೇಷನ್ ಮಹಾದೇವ್ ಕುರಿತು ಇಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಟ್ಟಿದ್ದೀರಿ ಮತ್ತು ಆದ್ರೆ ಅದನ್ನು ಮರಳಿ ಪಡೆಯುವುದು ನಮ್ಮ ಕರ್ತವ್ಯ ಎಂದು ಗುಡುಗಿದರು.
ಶಾ ಭಾಷಣ ಆರಂಭಿಸುತ್ತಿದ್ದಂತೆ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮೇಲ್ಮನೆಯಲ್ಲಿ ಇಲ್ಲದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಅಮಿತ್ ಶಾ ಸ್ವತಃ ಉತ್ತರಿಸುತ್ತಿದ್ದಾರೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರಿಗೆ ಹೆಚ್ಚು ಕೇಳಲು ಇಷ್ಟಪಡುತ್ತಾರೆ, ನಾನು ಉತ್ತರಿಸುತ್ತೇನೆ ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಆಪರೇಷನ್ ಮಹಾದೇವ್ ಎಂದು ಹೆಸರಿಸುವುದರ ಹಿಂದಿನ ಕಾರಣವನ್ನೂ ಅವರು ನೀಡಿದರು. ಛತ್ರಪತಿ ಮಹಾರಾಜ ಶಿವಾಜಿ ಯುದ್ಧಗಳನ್ನು ಮಾಡುವಾಗ, ‘ಹರ ಹರ ಮಹಾದೇವ್’ ಅವರ ಘೋಷಣೆಯಾಗಿತ್ತು. ಅದು ಸೈನಿಕರನ್ನು ಉತ್ಸಾಹದಿಂದ ತುಂಬುತ್ತಿತ್ತು ಎಂದು ಹೇಳಿದರು. ಮಹಾದೇವ್ ಅವರನ್ನು ಕೇವಲ ಧಾರ್ಮಿಕ ಅಥವಾ ಹಿಂದು ದೃಷ್ಟಿಕೋನದಿಂದ ನೋಡಬಾರದು, ಇದು ಮಿಲಿಟರಿ ಘೋಷಣೆಯಾಗಿದ್ದು, ಸೈನಿಕರಲ್ಲಿ ವಿಜಯದ ಉತ್ಸಾಹವನ್ನು ತುಂಬುತ್ತದೆ ಎಂದು ಶಾ ಹೇಳಿದರು.
ಆಪರೇಷನ್ ಮಹಾದೇವ್ ಅಡಿಯಲ್ಲಿ, ನಮ್ಮ ಸಶಸ್ತ್ರ ಪಡೆಗಳು ಮೂವರು ಭಯೋತ್ಪಾದಕರನ್ನು ಯಶಸ್ವಿಯಾಗಿ ಹತ್ಯೆ ಮಾಡಿದ್ದಾರೆ. ಅವರಲ್ಲಿ ಪಹಲ್ಗಾಮ್ ದಾಳಿಯ ಸಮಯದಲ್ಲಿ ಗುಂಡು ಹಾರಿಸಿದ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸುಲೇಮಾನ್ ಎಂಬುದು ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಎಲ್‌ಇಟಿಯ ಮತ್ತೊಬ್ಬ ಹಿರಿಯ ಕಮಾಂಡರ್ ಹಮ್ಜಾ ಅಫ್ಘಾನಿ ಕೂಡ ಸಾವನ್ನಪ್ಪಿದ್ದಾನೆ. ಇದಲ್ಲದೆ, ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದ ಹಿರಿಯ ಭಯೋತ್ಪಾದಕ ಜಿಬ್ರಾನ್ ಕೂಡ ಕೊಲ್ಲಲ್ಪಟ್ಟವರಲ್ಲಿ ಸೇರಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ ಭಾಗಿಯಾಗಿರುವುದನ್ನು ಪುರಾವೆಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ , ನಿನ್ನೆ ನೀವು ಅವರನ್ನು ಈ ದಿನ ಏಕೆ ಕೊಲ್ಲಲಾಯಿತು ಎಂದು ಕೇಳುತ್ತಿದ್ದಿರಿ? ಅವರನ್ನು ನಿನ್ನೆ ಏಕೆ ಕೊಲ್ಲಬಾರದಿತ್ತು? ಏಕೆಂದರೆ ರಾಹುಲ್ ಗಾಂಧಿ ತಮ್ಮ ಭಾಷಣ ಮಾಡಬೇಕಿತ್ತು ಅಂತ ಕಾಲೆಳೆದ್ರು. ಕಾಂಗ್ರೆಸ್‌ನ ಆದ್ಯತೆ ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವುದು ಅಲ್ಲ, ಬದಲಿಗೆ ಅದು ರಾಜಕೀಯ, ಅವರ ಮತಬ್ಯಾಂಕ್ ಮತ್ತು ಸಮಾಧಾನಗೊಳಿಸುವ ರಾಜಕೀಯ ಎಂದು ಇಡೀ ದೇಶ ನೋಡುತ್ತಿದೆ ಅಂತ ಅಮಿತ್ ಶಾ ಆರೋಪಿಸಿದರು.