14 ಸೈಟ್ ಕೊಟ್ಟಿದ್ವಿ, ಈಗ ನ್ಯಾಯಯುತವಾಗಿ ನಮಗೆ ವಾಪಾಸ್ ಬರಬೇಕು: ಯತೀಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಡಾ ನಿವೇಶನ ಪ್ರಕರಣದಲ್ಲಿ ನಮ್ಮ ತಂದೆಯನ್ನು ವಿನಾ ಕಾರಣ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಈ ಕಾರಣಕ್ಕಾಗಿ ನಾವು 14 ಸೈಟ್ ಗಳನ್ನು ವಾಪಸ್ಸು ಕೊಟ್ಟಿದ್ದೆವು. ನ್ಯಾಯಯುತವಾಗಿ ನಮಗೆ ಆ ಸೈಟ್ ಗಳು ಬರಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಇ.ಡಿ. ನೋಟಿಸ್‌ನಿಂದ ನಮ್ಮ ತಾಯಿ ಮನಸಿಕವಾಗಿ ನೊಂದಿದ್ದರು. ಈಗ ಹೈ ಕೋರ್ಟ್‌ ಇಸಿಆರ್‌ ರದ್ದು, ಹಾಗೂ ವಿಚಾರಣೆಗೆ ಹಾಜರಾಗಲು ನೀಡಿದ್ದ ಸಮನ್ಸ್‌ ವಜಾ ಮಾಡಿ ತೀರ್ಪು ನೀಡಿದ್ದರಿಂದ ಸಮಾಧಾನವಾಗಿದೆ.

ಅವತ್ತಿನ ಸಂದರ್ಭದಲ್ಲಿ ನಮಗೆ ಸೈಟ್‌ ವಾಪಸ್ಸು ಕೊಡಬೇಕಾದ ವಾತಾವರಣ ನಿರ್ಮಾಣ ಮಾಡಿದ್ದರು. ವಿನಾಕಾರಣ ಟೀಕೆ ನಿಲ್ಲಿಸಬೇಕಾಗಿತ್ತು. ಹೀಗಾಗಿ ನಾವು ಸೈಟ್ ವಾಪಸ್ಸು ಕೊಟ್ಟಿದ್ದೆವು. ನಮ್ಮದು ತಪ್ಪಿಲ್ಲ ಎಂದು ತನಿಖಾ ವರದಿ ಬಂದಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!