ಹೊಸದಿಗಂತ ಡಿಜಿಟಲ್ ಡೆಸ್ಕ್:
ಯತ್ನಾಳ್ ಅವರ ಸವಾಲು ಸ್ವೀಕಾರ ಮಾಡಿ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೂ, ಸಿಎಂಗೂ ಇದು ಸಂಬಂಧಿಸಿಲ್ಲ ಎಂದು ಶಿವಾನಂದ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಡೆಡ್ ಲೈನ್ ಫಿಕ್ಸ್ ಮಾಡಿದ್ದು ಯತ್ನಾಳ್, ಶುಕ್ರವಾರದೊಳಗೆ ರಾಜೀನಾಮೆ ಕೊಡದಿದ್ದರೆ ಅವರಪ್ಪನಿಗೆ ಹುಟ್ಟಿಲ್ಲ ಎಂದಿದ್ದರು. ಅದಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಹೀಗಾಗಿ ಯತ್ನಾಳ್ ಕೂಡ ರಾಜೀನಾಮೆ ಕೊಡಲಿ. ವಿಜಯಪುರ, ಬಸವನಬಾಗೇವಾಡಿಯಲ್ಲಾದ್ರೂ ಸರಿ ಅವರ ಎದುರು ಸ್ಪರ್ಧೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಯತ್ನಾಳ್ ಅವರ ತಂದೆ ತಾಯಿಗಳಿಗೆ ಹುಟ್ಟಿದ್ದಾರೆ. ನಾನು ಅವರಂತೆ ಮಾತನಾಡಲು ಇಷ್ಟಪಡಲ್ಲ. ಆದರೆ ನನ್ನ ಪೂರ್ವಜರ ಬಗ್ಗೆ ಪಾಟೀಲ್ ಹೆಸರಿನ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.