ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿನ ತಂಡ ಐಪಿಎಲ್ 18ನೇ ಸೀಸನ್ನ ಫೈನಲ್ ಪಂದ್ಯ ಆಡಲಿದೆ. ನಮ್ಮ ಟೀಂಗೆ ಆಲ್‌ದಿಬೆಸ್ಟ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಆಟಗಾರರನ್ನು ಹುರಿದುಂಬಿಸಲು ಆರ್ಸಿಬಿ ಜೆರ್ಸಿ ತೊಟ್ಟು ವಿಡಿಯೋ ಮಾಡಿದ್ದಾರೆ. ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ಶಿಪ್ ಗೆಲ್ಲಲಿ ಅಂತ ಹಾರೈಸುತ್ತಿದ್ದೇವೆ, ಇವತ್ತು ಮತ್ತೊಂದು ಅವಕಾಶ, ಇಡೀ ಕರ್ನಾಟಕ ಮಾತ್ರ ಅಲ್ಲ ಭಾರತವೂ ನಿಮ್ಮೊಂದಿಗಿದೆ, ನಿಮ್ಮ ಪರಿಶ್ರಮ ಗಮನಿಸುತ್ತಿದ್ದೇವೆ, ಗೆಲುವು ನಿಮ್ಮದೇ, ಈ ಸಲ ಕಪ್ ನಮ್ದೇ ಎಂದು ಹುರಿದುಂಬಿಸಿದ್ದಾರೆ.