Wednesday, October 22, 2025

ನೀವು ಚೆನ್ನಾಗಿ ಕಾಣಿಸುತ್ತಿದ್ದೀರಿ… ಸಿಗರೇಟ್‌ ಸೇದಬೇಡಿ: ಟರ್ಕಿ ಅಧ್ಯಕ್ಷನ ಮಾತಿಗೆ ಇಟಲಿ ಪ್ರಧಾನಿ ಮೆಲೋನಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಜಾದಲ್ಲಿ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಈಜಿಪ್ಟ್‌ನಲ್ಲಿ ನಡೆದ ಶಾಂತಿ ಶೃಂಗಸಭೆ ಸಮಯ ಟರ್ಕಿ ಅಧ್ಯಕ್ಷ ಟಯ್ಯೀಪ್ ಎರ್ಡೋಗನ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸ್ವಾರಸ್ಯಕರ ಸಂಭಾಷಣೆ ಇದೀಗ ಇಂಟರ್ನೆಟ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈಜಿಪ್ಟ್‌ನಲ್ಲಿ ಸೇರಿದ್ದ ಜಾಗತಿಕ ನಾಯಕರ ಸಮೂಹದಲ್ಲಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗು ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗಾನ್‌ ಅವರೊಂದಿಗೆ ಉಭಯ ಕುಶಲೋಪಹರಿ ನಡೆಸಿದ್ದಾರೆ.

ಈ ವೇಳೆ ಎರ್ಡೊಗಾನ್‌ ಅವರು ಸಿಗರೇಟ್‌ ಸೇದುವುದನ್ನು ತ್ಯಜಿಸುವಂತೆ ಮೆಲೋನಿ ಅವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಇಟಲಿ ಪ್ರಧಾನಿ ಉತ್ತರಿಸುವ ಮೊದಲೇ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರೇ, ‘ಅದು ಸಾಧ್ಯವಿಲ್ಲದ ಮಾತು’ ಎಂದು ಹೇಳಿದ್ದಾರೆ. ಆ ಬಳಿಕ ಮೆಲೋನಿ ನೀಡಿದ ಉತ್ತರ ಇದೀಗ ವೈರಲ್‌ ಆಗಿದೆ.

https://x.com/MarioNawfal/status/1977748661317881934?ref_src=twsrc%5Etfw%7Ctwcamp%5Etweetembed%7Ctwterm%5E1977748661317881934%7Ctwgr%5Ee59abc38d68ebca5c19f9ab4a5db5dd29ee3be8d%7Ctwcon%5Es1_&ref_url=https%3A%2F%2Fvijaykarnataka.com%2Fnews%2Fworld%2Fturkey-president-erdogan-requests-italy-pm-giorgia-meloni-to-quit-smoking-what-she-replies%2Farticleshow%2F124552926.cms

ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಎರ್ಡೊಗಾನ್‌ ಮೆಲೋನಿ ಅವರನ್ನು ಕಂಡು ನಿಂತುಕೊಂಡರು. ಬಳಿಕ ಅವರತ್ತ ತೆರಳಿ, ‘ನಾನು ನಿಮ್ಮನ್ನು ವಿಮಾನದಿಂದ ಇಳಿದು ಬರುತ್ತಿರುವಾಗ ನೋಡಿದೆ. ನೀವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ. ಆದರೆ ನೀವು ಸಿಗರೇಟ್‌ ಸೇದುವುದನ್ನು ಬಿಡಬೇಕು. ನಾನು ನಿಮ್ಮನ್ನು ತಂಬಾಕು ಚಟದಿಂದ ಮುಕ್ತಗೊಳಿಸಲು ಬಯಸುತ್ತೇನೆ’ ಎಂದರು.

ಇದಕ್ಕೆ ಕೂಡಲೇ ಪಕ್ಕದಲ್ಲದೇ ನಿಂತಿದ್ದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌, ‘ಸಾಧ್ಯವೇ ಇಲ್ಲ’ ಎಂದು ಉತ್ತರಿಸಿದರು. ಇದನ್ನು ಕೇಳಿ ನಸುನಕ್ಕ ಮೆಲೋನಿ, ‘ಧೂಮಪಾನ ತ್ಯಜಿಸುವುದರಿಂದ ತನ್ನ ಬೆರೆಯುವ ಶಕ್ತಿ ಕಡಿಮೆಯಾಗಬಹುದು. ನಾನು ಯಾರನ್ನೂ ಕೊಲ್ಲಲು ಬಯಸುವುದಿಲ್ಲ’ ಎಂದು ಹಾಸ್ಯಯ ಚಟಾಕಿ ಹಾರಿಸಿದರು.

ತಮ್ಮ ಸಂದರ್ಶನಗಳ ಸರಣಿಯನ್ನು ಆಧರಿಸಿದ ಪುಸ್ತಕದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು, ಟುನೀಷಿಯನ್ ಅಧ್ಯಕ್ಷ ಕೈಸ್ ಸಯೀದ್ ಸೇರಿದಂತೆ ಜಾಗತಿಕ ನಾಯಕರೊಂದಿಗಿನ ಬಾಂಧವ್ಯಕ್ಕೆ ಧೂಮಪಾನ ಸಹಾಯ ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ.

error: Content is protected !!