ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಫೆಬ್ರವರಿಯಲ್ಲಿ ನಡೆಯಲಿದೆ ಎನ್ನುವ ವದಂತಿಗೆ ವಿಜಯ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಎರಡು ಎರಡು ವರ್ಷಕ್ಕೊಮ್ಮೆ ವಿಜಯ್ ಮದುವೆ ವಿಜಯ್ ಮದುವೆ ಎಂದು ನೀವೇ ಹೇಳ್ತೀರಿ, ಆಮೇಲೆ ಮದುವೆ ಇಲ್ಲ ಎಂದು ಮತ್ತೆ ಹೇಳ್ತೀರಿ, ಪ್ರತೀ ಎರಡು ವರ್ಷಕ್ಕೊಮ್ಮೆ ಯಾರದ್ದಾದ್ರೂ ಜೊತೆ ನನ್ನ ಮದುವೆ ಮಾಡಿಸಿಬಿಡ್ತೀರಿ, ನನ್ನ ಮದುವೆ ಕಂಡ್ರೆ ಅಷ್ಟು ಇಷ್ಟಾನಾ ನಿಮಗೆಲ್ಲಾ ಎಂದು ವದಂತಿ ಸೃಷ್ಟಿಮಾಡಿದವರಿಗೆ ವಿಜಯ್ ಪ್ರಶ್ನಿಸಿದ್ದಾರೆ.
ಒಂದೇ ಮನೆಯಲ್ಲಿ ಇದ್ದಾರೆ, ಒಟ್ಟಿಗೇ ಟ್ರಾವೆಲ್ ಮಾಡ್ತಾರೆ ಎಂದೆಲ್ಲಾ ರೂಮರ‍್ಸ್ ಮಧ್ಯೆಯೂ ವಿಜಯ್ ತನ್ನ ಹಾಗೂ ರಶ್ಮಿಕಾ ರಿಲೇಷನ್‌ಶಿಪ್‌ಗೆ ಒಪ್ಪಿಕೊಂಡಿಲ್ಲ. ಅಥವಾ ರಿಲೇಷನ್‌ಶಿಪ್ ಇಲ್ಲದೆಯೂ ಇರಬಹುದು ಅಲ್ವಾ?