ನಮ್ಮ ಕನಸಿನಲ್ಲಿ ಏನೇನೋ ಬಂದು ಹೋಗುತ್ತದೆ. ಕಪ್ಪೆ ಹಾರಬಹುದು,ನೀವು ಕಿಡ್ನಾಪ್ ಆಗಿರಬಹುದು, ಮಹಡಿಯಿಂದ ಬಿದ್ದು ಹೋಗಬಹುದು, ದೇವರೇ ಬರಬಹುದು. ಪ್ರತೀ ಕನಸಿಗೂ ಅರ್ಥ ಇದೆ. ಈ ನಾಲ್ಕು ಕನಸುಗಳು ಬಂದರೆ ನೀವು ಲಕ್ಕಿ ಎಂದರ್ಥ!
ಕನಸಿನಲ್ಲಿ ಹೂವುಗಳಿಂದ ತುಂಬಿದ ಮರವನ್ನು ನೋಡಿದರೆ, ಈ ಕನಸುಗಳು ನಿಮ್ಮ ಅದೃಷ್ಟ ಶೀಘ್ರದಲ್ಲೇ ಬೆಳಗಲಿದೆ ಎಂಬುದನ್ನು ಸೂಚಿಸುತ್ತದೆ. ಹೂಗಳಿಂದ ತುಂಬಿದ ಮರಗಳನ್ನು ನೀವು ನಿಮ್ಮ ಕನಸಿನಲ್ಲಿ ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ಸಂಪತ್ತು ಸಂತೋಷ ಮತ್ತು ಸಮೃದ್ಧಿ ಎದುರಾಗಲಿದೆ ಎಂದರ್ಥ.
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ನೀವು ಮಳೆ ಬೀಳುವುದನ್ನು ನೋಡಿದರೆ ಅದು ನಿಮ್ಮ ಜೀವನಕ್ಕೆ ಶುಭ ಸೂಚನೆಯಾಗಿದೆ. ಎಂದರೆ ಒಬ್ಬ ವ್ಯಕ್ತಿಯು ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸಲಿದ್ದಾನೆ ಎಂಬುದಾಗಿದೆ. ಹಾಗೂ ಇದು ನೀವು ಸಂಪತ್ತಿನ ಮುಖ್ಯ ದೇವತೆಯಾದ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆದುಕೊಳ್ಳಲಿದ್ದೀರಿ ಎಂಬುದನ್ನು ಹೇಳುತ್ತದೆ.
ಕನಸಿನಲ್ಲಿ ಗುಲಾಬಿ ಹೂವನ್ನು ನೋಡಿದರೆ ಏನಾಗುತ್ತದೆ ಎಂಬುದನ್ನು ನಾವೀಗಾಗಲೇ ತಿಳಿದುಕೊಂಡಿದ್ದೇವೆ. ಅದೇ ರೀತಿ ಕನಸಿನಲ್ಲಿ ಗುಲಾಬಿ ಹೂಗಳನ್ನು ಕೂಡ ನೋಡುವುದು ತುಂಬಾನೇ ಶುಭ ಸೂಚನೆಯಾಗಿದೆ. ಯಾಕೆಂದರೆ, ಗುಲಾಬಿ ಹೂವುಗಳು ಲಕ್ಷ್ಮಿ ದೇವಿಗೆ ತುಂಬಾನೆ ಪ್ರಿಯವಾದ ಹೂಗಳಾಗಿವೆ. ಹಾಗಾಗಿ ಕನಸಿನಲ್ಲಿ ನೀವು ಗುಲಾಬಿ ಹೂಗಳನ್ನು ನೋಡಿದರೆ ಅದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ನಿಮಗೆ ಸೂಚಿಸುತ್ತದೆ. ಕನಸಿನಲ್ಲಿ ಗುಲಾಬಿ ಹೂವನ್ನು ನೋಡುವುದು ಎಂದರೆ ಒಬ್ಬ ವ್ಯಕ್ತಿಯ ಹಲವು ವರ್ಷಗಳ ನನಸಾಗದೆ ಇರುವ ಕನಸುಗಳು ಸತ್ಯದಲ್ಲೆ ನನಸಾಗಲಿವೆ ಎಂಬುದನ್ನು ಹೇಳುತ್ತದೆ.
ಕನಸಿನಲ್ಲಿ ನಾವು ಹಣವನ್ನು ನೋಡುವುದು ತುಂಬಾನೇ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸುಗಳು ನೀವು ಭವಿಷ್ಯದಲ್ಲಿ ಅಪಾರ ಸಂಪತ್ತಿನ ಲಾಭವನ್ನು ಪಡೆಯಲಿದ್ದೀರಿ ಎಂಬುದನ್ನು ಹೇಳುತ್ತದೆ. ನಿಮ್ಮ ಕನಸಿನಲ್ಲಿ ಹಣದ ಬಂಡಲನ್ನು ನೀವು ನೋಡಿದರೆ, ಹಣದ ಸಮಸ್ಯೆ ಕಳೆದು ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನಲಾಗಿದೆ.