April 12, 2026
Sunday, April 12, 2026
spot_img

ನಿಂಗಿದು ಬೇಕಿತ್ತಾ ಮಗನೇ..! ಮೆಟ್ರೋದಲ್ಲಿ ಗನ್ ಹಿಡ್ಕೊಂಡು ಪ್ರಾಂಕ್ ಮಾಡೋಕೆ ಹೋಗಿ ಏನಾಯ್ತು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಜನ ಏನೇನೋ ಮಾಡ್ತಾರೆ. ಇಲ್ಲೊಬ್ಬ ಭೂಪ ಫೇಮಸ್ ಅಗ್ಗೋಕೆ ಹೋಗಿ ಪೊಲೀಸ್ ಕೈಗೆ ಸಿಕ್ಕೋಹಾಕಿಕೊಂಡಿದ್ದಾನೆ.

ಹೌದು! ನಮ್ಮ ಮೆಟ್ರೋದಲ್ಲಿ ಪ್ರಾಂಕ್ ವಿಡಿಯೋ ಮಾಡೋಕೆ ಆಟಿಕೆ ಗನ್ ತೆಗೆದುಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಆತನನ್ನು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ವಶಕ್ಕೆ ಪಡೆದು ಬಳಿಕ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:

ಮಾಹಿತಿಯ ಪ್ರಕಾರ, ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಫೆಬ್ರವರಿ 6ರಂದು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆತನ ಜೇಬಿನಲ್ಲಿ ಗನ್ ಇದ್ದುದನ್ನು ಗಮನಿಸಿದ ಇತರ ಪ್ರಯಾಣಿಕರು ಆತಂಕಗೊಂಡು ತಕ್ಷಣ ಮೆಟ್ರೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೆಟ್ರೋ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಅದು ನಕಲಿ ಆಟಿಕೆ ಗನ್ ಎಂದು ತಿಳಿದುಬಂದಿದೆ. ಕೇವಲ ವಿಡಿಯೋ ಮಾಡಲು ಬಳಸಲು ತಂದಿದ್ದೇನೆ ಎಂದು ಯುವಕ ಹೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಜೊತೆಗೆ ಮೆಟ್ರೋ ನಿಯಮ ಉಲ್ಲಂಘನೆ ಮಾಡಿದ ಕಾರಣದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ 400 ರೂಪಾಯಿ ದಂಡ ವಿಧಿಸಿ ಯುವಕನನ್ನು ಬಿಡುಗಡೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !