HAIR CARE | ವಾರಕ್ಕೊಮ್ಮೆಯಾದ್ರೂ ತಲೆಕೂದಲನ್ನು ಡೀಪ್‌ಕ್ಲೀನ್‌ ಮಾಡ್ಲೇಬೇಕು, ಹೇಗೆ ನೋಡಿ..

ಆಗಾಗ ಹೊಟ್ಟೆಯನ್ನು, ಚರ್ಮವನ್ನು ಹೇಗೆ ಡೀಪ್‌ ಕ್ಲೀನ್‌ ಮಾಡ್ತಿರೋ ಅದೇ ರೀತಿ ಸ್ಕಾಲ್ಪ್‌ ಹಾಗೂ ಕೂದಲು, ನೆತ್ತಿಯನ್ನು ಡೀಪ್‌ಕ್ಲೀನ್‌ ಮಾಡಬೇಕು. ಹೇರ್‌ ಡೀಟಾಕ್ಸ್‌ ಚರ್ಮದ ಕೋಶಗಳು ಮತ್ತು ಕೊಳಕುಗಳನ್ನು ತೆಗೆದುಹಾಕುತ್ತದೆ.ಇದು ನಿಮ್ಮ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸಲು ಕೆಲವು ಉತ್ತಮ ಮಾರ್ಗಗಳು ಇಲ್ಲಿವೆ…

ನೆತ್ತಿ ಮಸಾಜ್ ಮಾಡಿ:
ನೆತ್ತಿಯನ್ನು ಮೆದುವಾಗಿ ಮಸಾಜ್ ಮಾಡಿ,ಇದು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೂದಲಿನ ನೈಸರ್ಗಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಸ್ಥಿತಿಯನ್ನು ಸುಧಾರಿಸುತ್ತದೆ.

ನೆತ್ತಿಯನ್ನು ಬಾಚಿಕೊಳ್ಳಿ:

ಬ್ರಷ್‌ನಿಂದ ನಿಮ್ಮ ನೆತ್ತಿಯನ್ನು ನಿಧಾನವಾಗಿ ಬಾಚಿಕೊಳ್ಳಿ ಅದರಿಂದ ನಿಮಗೆ ಹೆಚ್ಚುವರಿ ಚರ್ಮದ ರಚನೆಯನ್ನು ತೆಗೆದು ಹಾಕಲು, ತಲೆಹೊಟ್ಟು ಹೊರಹಾಕಲು ಸಹಾಯ ಮಾಡುತ್ತದೆ.

ತೈಲ ಚಿಕಿತ್ಸೆ ಬಳಸಿ:

ನಿಮ್ಮ ನೆತ್ತಿಯನ್ನು ಎಣ್ಣೆಯಿಂದ ಮಸಾಜ್ ಮಾಡಿ ಸ್ವಲ್ಪ ಸಮಯ ಬಿಡಿ. ನಂತರ ತಲೆ ತೊಳೆಯಿರಿ. ಕೂದಲಿಗೆ ಎಣ್ಣೆ ಹಾಕುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತವೆ.

ನಿಮ್ಮದೇ ಶಾಂಪೂ ಮಾಡಿಕೊಳ್ಳಿ
ಒಂದು ಭಾಗ ಅಡಿಗೆ ಸೋಡಾ, ಮೂರು ಭಾಗ ಉಗುರು ಬೆಚ್ಚಗಿನ ನೀರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮೂರು ನಿಮಿಷಗಳ ಕಾಲ ಬಿಡಿ ನಂತರ ಒದ್ದೆ ಕೂದಲಿಗೆ ಹಚ್ಚಿ ತೊಳೆಯಿರಿ. ಕೂದಲಿಗೆ ಆಪಲ್ ಸೈಡರ್ ವಿನೆಗಾರ್ ಹಾಕಿ ತೊಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!