ನೀವು ಕರೆದ ಭೋಜನಕೂಟಕ್ಕೆ ಭಾಗಿಯಾಗುವುದಿಲ್ಲ: ಶರದ್ ಪವಾರ್ ಗೆ ಫಡ್ನವಿಸ್ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರ ಬಾರಾಮತಿ ನಿವಾಸದಲ್ಲಿ ಶನಿವಾರ ಮಧ್ಯಾಹ್ನ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಭಾಗಿಯಾಗುವುದಿಲ್ಲ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis )ಹೇಳಿದ್ದಾರೆ.

ನೀವು ಬರೆದ ಪತ್ರ ಮತ್ತು ನಿಮ್ಮಿಂದ ಭೋಜನಕೂಟದ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪ್ರಯತ್ನದ ನಂತರ ಬಾರಾಮತಿಯಲ್ಲಿ ನಮೋ ಮಹಾರೋಜ್​​​ಗಾರ್ ಮೇಳವನ್ನು ಆಯೋಜಿಸುತ್ತಿರುವುದು ನಿಮಗೆ ತಿಳಿದಿದೆಯಲ್ಲವೇ, ಬಾರಾಮತಿಯಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಛತ್ರಪತಿ ಸಂಭಾಜಿ ಮಹಾರಾಜರ ಸ್ಮಾರಕದ ಭೂಮಿಪೂಜೆಯನ್ನು ಬುದ್ರುಕ್ ಮತ್ತು ತುಳಜಾಪುರದಲ್ಲಿ ನಡೆಸಲಾಗುವುದು. ತಕ್ಷಣವೇ ಕ್ರಾಂತಿಕಾರಿ ಲಾಹುಜಿ ವಸ್ತಾದ್ ಸಾಳ್ವೆ ಅವರ ಸ್ಮಾರಕದ ಭೂಮಿಪೂಜೆಯನ್ನು ನಿಗದಿಪಡಿಸಲಾಗಿದೆ.ಎರಡು ಪ್ರಮುಖ ಕಾರ್ಯಕ್ರಮಗಳನ್ನು ಒಂದರ ನಂತರ ಒಂದರಂತೆ ಆಯೋಜಿಸುತ್ತಿರುವುದರಿಂದ ಇಡೀ ದಿನ ತುಂಬಾ ಬ್ಯುಸಿ. ಆದ್ದರಿಂದ, ಈ ಬಾರಿ ನಿಮ್ಮ ತುರ್ತು ಆಹ್ವಾನವನ್ನು ಸ್ವೀಕರಿಸಲು ನನಗೆ ಸಾಧ್ಯವಾಗುವುದಿಲ್ಲ. ಮತ್ತೊಮ್ಮೆ ಧನ್ಯವಾದಗಳು ಎಂದು ಶರದ್ ಪವಾರ್ ಅವರಿಗೆ ಬರೆದ ಪತ್ರದಲ್ಲಿ ಫಡ್ನವಿಸ್ ತಿಳಿಸಿದ್ದಾರೆ.

83 ವರ್ಷದ ನಾಯಕ, ಶರದ್ ಪವಾರ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಸೋದರಳಿಯ ಅಜಿತ್ ಪವಾರ್ ಸೇರಿದಂತೆ ಅವರ ಇಬ್ಬರು ಡಿಸಿಎಂಗಳನ್ನು ಮಾರ್ಚ್ 2 ರಂದು ಊಟಕ್ಕೆ ಆಹ್ವಾನಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!