Thursday, January 8, 2026

ರೈಲಿನ ಮೇಲೆ ಹತ್ತಿ ನಿಂತು ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿದ ಯುವಕ, ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಒಬ್ಬ ಯುವಕ ರೈಲಿನ ಮೇಲೆ ಹತ್ತಿ ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿದ್ದಾನೆ. ಶ್ರೀಕಾಕುಳಂ ಜಿಲ್ಲೆಯ ಸೋಂಪೇಟ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಭುವನೇಶ್ವರದಿಂದ ತಿರುಪತಿಗೆ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸೋಂಪೇಟ ರೈಲು ನಿಲ್ದಾಣಕ್ಕೆ ಬಂದು ನಿಂತಿತು. ರೈಲು ಆ ನಿಲ್ದಾಣದಲ್ಲಿ ಕೇವಲ ಎರಡು ನಿಮಿಷಗಳ ಕಾಲ ನಿಲ್ಲುತ್ತದೆ. ಪ್ರಯಾಣಿಕರು ರೈಲನ್ನು ಹತ್ತಿ ಹತ್ತುತ್ತಿದ್ದಾಗ ಆ ಯುವಕ ರೈಲಿನ ಮೇಲ್ಭಾಗಕ್ಕೆ ಹತ್ತಿ ಹುಚ್ಚಾಟ ನಡೆಸಿದ್ದಾನೆ.

ಇದನ್ನೂ ಓದಿ: LIFE |ಜೀವನದಲ್ಲಿ ಕಳೆದು ಹೋದ ನಂಬಿಕೆ ಮತ್ತೆ ಹುಟ್ಟೋಕೆ ಸಾಧ್ಯಾನಾ? ಏನಂತೀರಾ?

ಭುವನೇಶ್ವರ-ತಿರುಪತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಮೇಲ್ಛಾವಣಿಯ ಮೇಲೆ ವ್ಯಕ್ತಿಯೊಬ್ಬ ಹತ್ತಿದ್ದಾನೆ. ಈ ಅವ್ಯವಸ್ಥೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಹೈ ವೋಲ್ಟೇಜ್ ಲೈನ್‌ಗಳಿಂದ ಆ ವ್ಯಕ್ತಿಯನ್ನು ರಕ್ಷಿಸಲು ಅಧಿಕಾರಿಗಳು ರೈಲನ್ನು ನಿಲ್ಲಿಸಿದರು. ಹೀಗಾಗಿ, ರೈಲು ಸೋಂಪೆಟ್ ರೈಲು ನಿಲ್ದಾಣದಿಂದ 20 ನಿಮಿಷ ತಡವಾಗಿ ಹೊರಟಿತು.

error: Content is protected !!