ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ನಟಿಯರು ಸದಾ ಆಕ್ಟೀವ್ ಆಗಿ ಇಉತ್ತಾರೆ. ತಮ್ಮ ಬಗ್ಗೆ ಜನರಿಗೆ ತಿಳಿಸಿ ಅವರ ಪ್ರೀತಿ ಗಳಿಸಲು ಪ್ರಯತ್ನ ಪಡುತ್ತಾರೆ. ಈ ಕಾರಣಕ್ಕಾಗಿಯೇ ನಟಿಯರು ಟೈಮ್ ಟೈಮ್‌ಗೆ ನನ್ನ ಬಗ್ಗೆ ಏನಾದರೂ ತಿಳ್ಕೋಬೇಕಾ? ಪ್ರಶ್ನೆ ಕೇಳಿ ಎನ್ನುವ ಸೆಷನ್ ಮಾಡುತ್ತಾರೆ. ಇದರಲ್ಲಿ ನಟಿ ಚೈತ್ರಾ ಆಚಾರ್‌ಗೆ ವಿಚಿತ್ರ ಪ್ರಶ್ನೆ ಎದುರಾಗಿದೆ.
ಇನ್ಸ್ಟಾಗ್ರಾಮರ್ ಒಬ್ಬ ಸಿನಿಮಾ ಚಾನ್ಸ್‌ಗಾಗಿ ಯಾರ ಜೊತೆಯಾದ್ರೂ ಸೆಕ್ಸ್ ಮಾಡಿದ್ದೀರಾ? ಎನ್ನುವ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಮುಜುಗರವಿಲ್ಲದೆ ನಟಿ ಚೈತ್ರಾ ಉತ್ತರ ನೀಡಿದ್ದು, ಟ್ಯಾಲೆಂಟ್ ಇರೋರಿಗೆ ಸೆಕ್ಸ್ ಅವಶ್ಯಕತೆ ಯಾಕೆ ಹೇಳಿ? ನಾನು ಪ್ರತಿಭಾವಂತೆ, ನನ್ನ ಆಕ್ಟಿಂಗ್ ಸ್ಕಿಲ್ಸ್‌ನಿಂದ ಕೆಲಸ ಸಿಕ್ಕಿದೆ. ಮಂಚ ಏರೋದಿಲ್ಲ, ಏರಿಯೂ ಇಲ್ಲ ಎಂದಿದ್ದಾರೆ.