ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಆರ್ಆರ್ (RRR) ಸಿನಿಮಾದ ಗೆಲುವಿನ ಮೂಲಕ ಜೂ ಎನ್ಟಿಆರ್ (Jr NTR) ಬಾಲಿವುಡ್ನಿಂದಆಫರ್ಗಳು ಬರುತ್ತಿವೆ. ಬಾಲಿವುಡ್ಗೆ ಕಾಲಿಡಲು ಸಜ್ಜಾಗಿದ್ದಾರೆ.
ಬಾಲಿವುಡ್ನಲ್ಲಿ ಈಗಾಗಲೇ ಅಭಿಮಾನಿ ಬಳಗ ಹೊಂದಿರುವ ಎನ್ಟಿಆರ್ ವಾರ್ ಸಿನಿಮಾದ ಎರಡನೇ ಭಾಗದಲ್ಲಿ ನಟ ಹೃತಿಕ್ ರೋಷನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ವಾರ್ ಸಿನಿಮಾದ ಮೊದಲ ಭಾಗದಲ್ಲಿ ಹೃತಿಕ್ ರೋಷನ್ ಜೊತೆಗೆ ಯುವನಟ ಟೈಗರ ಶ್ರಾಫ್ ನಟಿಸಿದ್ದರು. ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದ ವಾರ್ ಸೂಪರ್ ಹಿಟ್ ಆಗಿತ್ತು. ಇದೀಗ ಅದರ ಎರಡನೇ ಭಾಗವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದು, ಹೃತಿಕ್ ಜೊತೆಗಾರನ ಪಾತ್ರಕ್ಕೆ ಜೂ ಎನ್ಟಿಆರ್ ಅವರನ್ನು ಒಪ್ಪಿಸಲಾಗಿದೆ.
ಯಶ್ ರಾಜ್ ಫಿಲಮ್ಸ್ ಅವರೇ ವಾರ್ 2 ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಾರ್ 2, ಜೂ ಎನ್ಟಿಆರ್ ಅವರ ಮೊದಲ ಅಧಿಕೃತ ಹಿಂದಿ ಸಿನಿಮಾ ಆಗಿದೆ. ಆದರೆ ಈ ಹಿಂದೆ ಜೂ ಎನ್ಟಿಆರ್ ನಟಿಸಿರುವ ಹಲವು ತೆಲುಗು ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆ ಆಗಿವೆ. ಟಿವಿಗಳಲ್ಲಿಯೂ ಪ್ರಸಾರವಾಗಿವೆ.