ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಂಕಿತ ಲವ್ ಜಿಹಾದ್ ಪ್ರೀತಿಪಾಶದಲ್ಲಿ ಸಿಲುಕಿಸುವ ವೇಳೆ ಅಗರ್ಭ ಶ್ರೀಮಂತನಂತೆ ನಟಿಸಿ, ಯುವತಿಯನ್ನು ಮದುವೆಯಾಗಿ ಮಗುವನ್ನು ಕರುಣಿಸಿದ ಬಳಿಕ ಭಿಕಾರಿಯಂತೆ ಅವರಿವರಲ್ಲಿ ಅಂಗಲಾಚಿ ಜೀವನ ನಡೆಸುತ್ತಿದ್ದ ಗಂಡನಿಗೆ ಕುಪಿತ ಪತ್ನಿ ಬೀದಿಯಲ್ಲೆ ಧರ್ಮದೇಟು ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಆಕೆ ಶಿಕಾರಿಪುರದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದಾಕೆ. ಪ್ರೀತಿ ಪ್ರೇಮದ ನಾಟಕವಾಡಿದ ಹಿಂದಿ ಭಾಷಿಗ ಸಮಿರುಲ್ಲಾ ಆಕೆಯನ್ನು ಪ್ರೇಮಪಾಶಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾಗುತ್ತಾನೆ. ಪ್ರೇಮಪಾಶಕ್ಕೆ ಸಿಲುಕಿದ ವೇಳೆ ಹೆತ್ತವರನ್ನು ಧಿಕ್ಕರಿಸಿ, ನನ್ನ ಪ್ರಿಯತಮನೊಂದಿಗೆ ಸುಂದರ ಬದುಕು ಕಟ್ಟಬಲ್ಲೆನೆಂದು ಭಾವಿಸಿ ಮನೆ ತೊರೆದು ಆತನೊಂದಿಗೆ ಬೆಂಗಳೂರಿಗೆ ಬಂದಾಕೆಗೆ ದಿನ ಕಳೆದಂತೆಲ್ಲಾ ತಾನು ನಂಬಿ ಬಂದಾತನ ನಿಜ ಸ್ವರೂಪ ತಿಳಿಯಲಾರಂಭಿಸಿತು. ಮಡಿ ಬಟ್ಟೆಯನ್ನುಟ್ಟುಕೊಂಡು ಶ್ರೀಮಂತನಂತೆ ವರ್ತಿಸುತ್ತಿದ್ದ ತನ್ನ ಪ್ರಿಯತಮ ಪ್ರೀತಿ ಪ್ರೇಮದ ನಾಟಕವಾಡುತ್ತಿದ್ದ ಸಮಯದಲ್ಲಿ ಇದ್ದಂತೆ ಬಳಿಕ ಇಲ್ಲದ್ದು ಅರಿವಾಗತೊಡಗಿತು. ಆ ವೇಳೆಯಾಗಲೇ ಮಗುವಿನ ತಾಯಿಯಾಗಿ ಜೀವನವೇ ದುಸ್ತರವಾದಂತಾಗಿ ತಾನು ನಂಬಿ ಕೆಟ್ಟೆನೆನ್ನುವ ಸತ್ಯದ ಅರಿವಾಗತೊಡಗಿತು.
ಕಳೆದೆರಡು ದಿನಗಳ ಹಿಂದೆ ಉಡುಪಿಯತ್ತ ಹೋಗೋಣವೆಂದು ಪತ್ನಿ ಪವಿತ್ರಾಳನ್ನು ಬುರ್ಕಾ ತೊಡಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ ಸಮಿರುಲ್ಲಾನಲ್ಲಿ ಬಸ್ಸಿನ ಟಿಕೇಟಿಗೂ ಹಣವಿಲ್ಲದಿದ್ದಾಗ ಇದ್ದ ಹಣಕ್ಕೆ ಹೊಂದಿಕೆಯಾಗುವಂತೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಬಸ್ಸಿನ ನಿರ್ವಾಹಕ ಉಪ್ಪಿನಂಗಡಿಯಲ್ಲಿ ಸಮಿರುಲ್ಲಾನನ್ನು ಇಳಿಸಿದ್ದನೆನ್ನಲಾಗಿದೆ.
ಪತಿಯೊಂದಿಗೆ ಬಸ್ಸಿನಿಂದ ಇಳಿದ ಪವಿತ್ರಾಳಿಗೆ ಅವಮಾನವಾದಂತಾಗಿ, ಹಣವಿಲ್ಲದ ಮೇಲೆ ಪ್ರಯಾಣಕ್ಕೆ ಮುಂದಾದ ಗಂಡನ ಅರ್ಥಾತ್ ಪ್ರಿಯತಮನ ವರ್ತನೆಯಿಂದ ಆಕ್ರೋಶಗೊಂಡು ಬೀದಿಯಲ್ಲೇ ಆತನಿಗೆ ಹೊಡೆಯುತ್ತಾಳೆ. ಇವರಿಬ್ಬರ ಸಂಘರ್ಷವನ್ನು ಕಂಡು ಜನ ಜಮಾಯಿಸಿ ವಿಚಾರಿಸಿದಾಗ ತಾನು ಮುಸ್ಲಿಂ ಎಂದೂ ತನ್ನ ಪತ್ನಿ ಹಿಂದು ಎಂದೂ ಪರಿಚಯಿಸುತ್ತಾನೆ. ಮಾತ್ರವಲ್ಲದೆ ಪತ್ನಿಯೊಡನೆ ಇದು ಮುಸ್ಲಿಂ ಬಾಹುಳ್ಯದ ಪ್ರದೇಶ. ಇಲ್ಲಿ ನಿನ್ನ ನೆರವಿಗೆ ಯಾರೂ ಬರುವುದಿಲ್ಲವೆಂದು ಸವಾಲೆಸೆಯುತ್ತಾನೆ.
ಇವರಿಬ್ಬರ ಸಂಘರ್ಷ ಸೂಕ್ಷ್ಮ ಸ್ಥಿತಿಗೆ ತಿರುಗುವ ಲಕ್ಷಣ ಗೋಚರಿಸಿದಾಗ ಸ್ಥಳಕ್ಕಾಗಮಿಸಿದ ಪೊಲೀಸರು ಅವರಿಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಅವರಲ್ಲಿನ ಗೋಣಿಚೀಲದಂತಿದ್ದ ಚೀಲದಲ್ಲಿನ ದಾಖಲೆ ಪತ್ರಗಳನ್ನು, ತಾಯಿ ಕಾರ್ಡ್ ದಾಖಲೆಯನ್ನು ಪರಿಶೀಲಿಸಿದರು. ಬಳಿಕ ಬಸ್ ಟಿಕೇಟ್ ದರವನ್ನು ತಾವೇ ನೀಡಿ ಅವರಿಬ್ಬರನ್ನೂ ಮತ್ತೆ ಬೆಂಗಳೂರು ಬಸ್ಸಿನಲ್ಲಿ ಕಳುಹಿಸಿಕೊಟ್ಟರು.
ಇತ್ತ ತನ್ನ ಹೆತ್ತವರು ಕಷ್ಠ್ಠಪಟ್ಟು ದುಡಿದು ಜೀವನದುದ್ದಕ್ಕೂ ಸ್ವಾಭಿಮಾನಿ ಬದುಕು ಬಾಳಿದ್ದ ಶಿಕಾರಿಪುರದ ಪವಿತ್ರಾಳಿಗೆ ಪ್ರೇಮಪಾಶಕ್ಕೆ ಸಿಲುಕಿದ ವೇಳೆ ಹೆತ್ತವರ ತ್ಯಾಗ ಪ್ರೀತಿ ಯಾವುದೂ ಗೋಚರಿಸದಿದ್ದದ್ದು , ದಿನಗಳ ಹಿಂದೆ ಪರಿಚಯವಾದ ಅಪರಿಚಿತ ವ್ಯಕ್ತಿಯನ್ನು ನಂಭಿ ಹೆತ್ತವರನ್ನು ಬಂಧು ಬಳಗವನ್ನು ತೊರೆದು ಆತನ ಹಿಂದೆಯೇ ಸಾಗಿದ್ದು, ನೋಡು ನೋಡುತ್ತಿದ್ದಂತೆಯೇ ಸುಸ್ಥಿತಿಯಲ್ಲಿದ್ದ ಬದುಕಿನಿಂದ ದುಃಸ್ಥಿತಿಯ ಬದುಕಿನ ಪ್ರಪಾತಕ್ಕೆ ಜಾರಿದ್ದು, ತನ್ನವರೆನ್ನುವವರು ಯಾರೂ ಇಲ್ಲದಂತಾಗಿ ದಿಕ್ಕು ದೆಸೆಯಿಲ್ಲದ ವ್ಯಕ್ತಿಯೊಂದಿಗೆ ಅಕ್ಷರಶಃ ಭಿಕಾರಿಯಂತಾದ ಹೆಣ್ಣೊಬ್ಬಳ ಬದುಕಿನ ಘೋರ ದುರಂತ ಈ ಬೀದಿ ಜಗಳದಿಂದ ಅನಾವರಣವಾದಂತಾಗಿದೆ.