ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ದೇಗುಲದ ಮುಂದೆ ಬಾಲಿವುಡ್ ಸಿನಿಮಾ ಹಾಡೊಂದಕ್ಕೆ ನೃತ್ಯ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಘಟನೆ ಮಾಸುವ ಮುನ್ನವೇ ಈಗ ಇನ್ನೊಂದು ಯುವತಿ ದೇಗುಲದ ಮುಂದೆ ಡಾನ್ಸ್ ಮಾಡಿ ವಿವಾದ ಸೃಷ್ಟಿಸಿದ್ದಾಳೆ.
ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲ ದೇಗುಲದ ಮುಂದೆ ಯುವತಿ ಹಾಡೊಂದಕ್ಕೆ ನರ್ತಿಸಿದ್ದಾಳೆ. ಈ ಬಗ್ಗೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ತನಿಖೆಗೆ ಆದೇಶಿಸಿದ್ದಾರೆ.
ಡಾನ್ಸ್ ಮಾಡಿದ ಯುವತಿಯ ಹೆಸರು ಪತ್ತೆಯಾಗಿಲ್ಲ. ಆದರೆ ಇನ್ಸ್ಟಾಗ್ರಾಮ್ ರೀಲ್ಸ್ಗಾಗಿ ಈಕೆ ಬಾಲಿವುಡ್ನ ಹಲವು ಹಾಡುಗಳ ಸಂಯೋಜನೆಯ ರಿಮಿಕ್ಸ್ಗೆ ನರ್ತಿಸಿದ್ದಾಳೆ.
#MadhyaPradesh #ujjainmahakaal : महाकाल मंदिर में रील बनाने पर वायरल हुई लड़की
कलेक्टर ने मामले की जांच की बात कही वही पुजारी भी नाराज हें. MP के गृहमंत्री @drnarottammisra ने कहा- "इस तरह की चीजें बर्दाश्त नहीं की जाएगी"#Mahakaltemple #Reelsinstagram #MadhyaPradesh pic.twitter.com/5cv9zkmMCZ— Shubhangini Singh (@SomvanshiShubh) October 18, 2022
ಈ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ, ತನಿಖೆ ನಡೆಸುವಂತೆ ನಾನು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಆದೇಶಿಸಿದ್ದೇನೆ. ಧಾರ್ಮಿಕ ನಂಬಿಕೆಗಳ ಜೊತೆ ಚೆಲ್ಲಾಟವಾಡುವುದಕ್ಕ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾಕಾಲ ದೇಗುಲದ ಗರ್ಭಗುಡಿಯಲ್ಲಿ ಶಿವನಿಗೆ ಜಲಾಭಿಷೇಕವಾಗುತ್ತಿದ್ದರೆ ಹೊರಗೆ ಯುವತಿ ಡಾನ್ಸ್ ಮಾಡುತ್ತಿದ್ದಳು. ಯುವತಿಯ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಹಾಕಾಲ ದೇಗುಲದ ಪುರೋಹಿತರು ಯುವತಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.