Saturday, January 10, 2026

ಪ್ರಿಯಕರನ ಎದುರೇ ಯುವತಿಯ ಮೇಲೆ ಗ್ಯಾಂಗ್ ರೇಪ್! ಮೂವರು ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಡಿಶಾದ ಪುರಿಯ ಬೀಚ್ ಬಳಿ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನ ಎದುರಲ್ಲೇ ಮೂವರು ಕಾಮುಕರು ಅತ್ಯಾಚಾರವೆಸಗಿರುವ ಹೀನ ಕೃತ್ಯ ನಡೆದಿದೆ.

ಯುವತಿಯು ಪ್ರಿಯಕರನೊಂದಿಗೆ ಬಲಿಹರ್ಚಂಡಿ ದೇವಾಲಯದ ಬಳಿ ಕುಳಿತು ಕಾಲ ಕಳೆಯುತ್ತಿದ್ದರು. ಇದನ್ನು ಗಮನಿಸಿದ ಮೂವರು ಆರೋಪಿಗಳು ಅವರ ವೀಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಬಳಿಕ ಅವರ ಬಳಿ ಬಂದು ವೀಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಹಣ ಕೊಡಲು ನಿರಾಕರಿಸಿದ ವೇಳೆ ಆರೋಪಿಗಳು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಆತನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಎದುರೇ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.

ಯುವತಿಯು ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಮೂವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆರೋಪಿಗಳ ಮೊಬೈಲ್‌ನಲ್ಲಿದ್ದ ವೀಡಿಯೋವನ್ನೂ ಡಿಲೀಟ್ ಮಾಡಿದ್ದಾರೆ.

error: Content is protected !!