ಹೊಸದಿಗಂತ ಡಿಜಿಟಲ್ ಡೆಸ್ಕ್:
18 ವರ್ಷದ ಯುವಕನೊಬ್ಬ ಕಲ್ಪೆಟ್ಟ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಯನಾಡು ಜಿಲ್ಲೆಯ ಅಂಬಲವಾಯಲ್ ಪ್ರದೇಶದಲ್ಲಿ ನಡೆದಿದೆ.
ಮೃತ ಯುವಕನನ್ನು ಗೋಕುಲ್ ಎಂದು ಗುರುತಿಸಲಾಗಿದೆ.
ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋಝಿಕ್ಕೋಡ್‌ನಿಂದ ಗೋಕುಲ್ ಮತ್ತು ಬಾಲಕಿಯನ್ನು ವಶಕ್ಕೆ ಪಡೆದ ನಂತರ ವಯನಾಡಿನ ಕಲ್ಪೆಟ್ಟ ಪೊಲೀಸ್ ಠಾಣೆಗೆ ಕರೆತಂದಿದ್ದರು.
ಬಾಲಕಿಯನ್ನು ಸಖಿ ಎಂಬ ಸರ್ಕಾರಿ ಮಹಿಳಾ ಆಶ್ರಯ ತಾಣಕ್ಕೆ ಸ್ಥಳಾಂತರಿಸಲಾಯಿತು, ಆದರೆ ಗೋಕುಲ್ ನನ್ನು ಠಾಣೆಯಲ್ಲಿಯೇ ಇರಿಸಲಾಯಿತು. ರಾತ್ರಿಯ ಸಮಯವಾದ್ದರಿಂದ ಆತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಸಾಧ್ಯವಾಗದ ಕಾರಣ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.