April 9, 2026
Thursday, April 9, 2026
spot_img

ಜನರ ಹೊಡೆತದಿಂದ ಯುವಕ ಸಾವು! ಹುಡುಗಿಯರು ಡ್ರೆಸ್‌ ಚೇಂಜ್‌ ಮಾಡುವಾಗ ಕದ್ದು ನೋಡಿದ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರ್ಕಾರಿ ಶಾಲೆಯ ಹೆಣ್ಣುಮಕ್ಕಳು ಬಟ್ಟೆ ಬದಲಾಯಿಸುವಾಗ ಕದ್ದು ನೋಡಿದ ಆರೋಪದ ಮೇಲೆ ಯುವಕನಿಗೆ ಸ್ಥಳೀಯರು ಚೆನ್ನಾಗಿ ಥಳಿಸಿದ್ದಾರೆ. ಇದರಿಂದ ಯುವಕನಿಗೆ ಹೃದಯಾಘಾತವಾಗಿದೆ.

ಈ ಘಟನೆ ಬಾಗಲಕೋಟೆಯ ಜಮಖಂಡಿಯ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 19 ವರ್ಷದ ಸುದೀಪ್ ಪಾಂಗೆ ಎಂದು ಗುರುತಿಸಲಾಗಿದೆ. ವಾರ್ಷಿಕೋತ್ಸವದ ವೇಳೆ ಶಾಲೆಯ ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ಹೆಣ್ಣುಮಕ್ಕಳು ಬಟ್ಟೆ ಬದಲಾಯಿಸುವುದನ್ನು ನೋಡಿದ್ದಾನೆ. ಹಾಗೂ ಕಾರ್ಯಕ್ರಮದ ಮೇಲೆ ಕಲ್ಲು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

ರಾಜು ಮಾಳಿ, ವಿಜಯ್ ಸಾವಳಗಿ ಮತ್ತು ಮಲ್ಲಿಕಾರ್ಜುನ ಮಾಳಿ ಎಂಬ ಮೂವರು ಯುವಕರು ಸುದೀಪ್‌ಗೆ ಥಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುದೀಪ್‌ ಬಿದ್ದ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಪಡೆಯುವಾಗ ಹೃದಯಾಘಾತವಾಗಿ ಆತ ಮೃತಪಟ್ಟಿದ್ದಾನೆ.

ಮೃತನ ಸಹೋದರ ಈ ಬಗ್ಗೆ ದೂರು ನೀಡಿದ್ದು, ಜಾತಿ ನಿಂದನೆ ಕೊಲೆ ಇದಾಗಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !