ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್‌ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಈ ವಿಚಾರವಾಗಿ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಸತ್ಯವಾಗಿಯೂ ನನಗೆ ಈ ಬಗ್ಗೆ ಗೊತ್ತಿಲ್ಲ. ಅದು ಅವರ ಬದುಕು, ಪೂರ್ತಿ ವಿಚಾರ ಏನು ಎಂದು ಗೊತ್ತಾದ ಮೇಲೆ ಮಾತನಾಡುತ್ತೇವೆ ನಟ ಶಿವರಾಜ್‌ಕುಮಾರ್ ಎಂದಿದ್ದಾರೆ.
ಯುವ ಡಿವೋರ್ಸ್ ಕುರಿತಾಗಿ ನಮಗೆ ಗೊತ್ತಿಲ್ಲ, ಸತ್ಯವಾಗಿಯೂ ಗೊತ್ತಿಲ್ಲ. ಬೇಸರ ಇದೆ, ಗೊತ್ತಿದ್ದು ಮಾತಾನಾಡಬೇಕು. ನೀವು ಹೇಳಿದ ಮೇಲೆ ಈ ವಿಚಾರ ಗೊತ್ತಾಗಿದ್ದು. ಗೊತ್ತಿಲ್ಲದೇ ಏನೂ ಮಾತಾನಾಡಬಾರದು. ಅದು ಅವರ ಬದುಕು. ಮನೆಗೆ ಹೋಗಿ ಈ ಬಗ್ಗೆ ಯುವ ಜತೆ ಮಾತನಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಮಾತನಾಡಿ ʻಇದು ನಮ್ಮ ಮನೆಯ ವಿಚಾರ. ಇಲ್ಲಿವರೆಗೂ ಅದರ ಬಗ್ಗೆ ಗೊತ್ತಿಲ್ಲ ಅದರ ಬಗ್ಗೆ ವಿಚಾರ ಮಾಡುತ್ತೇವೆ. ಈ ವಿಚಾರದಲ್ಲಿ ನಾವು ಇಬ್ಬರು ಮಾತಾನಾಡಬಾರದು ಎಂದರು.
ಸದ್ಯ ಯುವ ಪತ್ನಿ ಶ್ರೀದೇವಿ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ. 2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು.