March 5, 2026
Thursday, March 5, 2026
spot_img

ವಾಕಿಂಗ್‌ಗೆ ತೆರಳಿದ್ದ ಯುವಕರ ಮೇಲೆ ಹಲ್ಲೆ: ಪೊಲೀಸ್ ಠಾಣೆ ಎದುರು ಹೈಡ್ರಾಮಾ

ಹೊಸದಿಗಂತ ವರದಿ ಬೀದರ್:

ಬಸವಕಲ್ಯಾಣದ ಯಾತ್ರಿ ನಿವಾಸದ ಬಳಿ ಮಂಗಳವಾರ ಸಂಜೆ ವಾಕಿಂಗ್‌ಗೆ ತೆರಳಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ಆರೇಳು ಜನ ಅಪರಿಚಿತರಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಖಾಸಗಿ ಶಾಲೆಯ ಶಿಕ್ಷಕರಾದ ಸೈಯದ್ ಇಮ್ರಾನ್, ಮಹಮ್ಮದ್ ಆರೀಫ್ ಎಂಬುವವರ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ.

ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಲು ಮುಂದಾಗಿದ್ದರು. ಈ ವೇಳೆ ನಾನು ಪಕ್ಕಕ್ಕೆ ಸರಿದಿದ್ದರಿಂದ ಕಲ್ಲು ನನ್ನ ಪಕ್ಕದಲ್ಲಿ ಬಿದ್ದಿದೆ. ಆ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಸೈಯದ್ ಇಮ್ರಾನ್ ಆರೋಪಿಸಿದ್ದರು.

ಇದನ್ನೂ ಓದಿ:

ಇನ್ನು, ಇದೇ ಘಟನೆಗೆ ಸಂಬಂಧಪಟ್ಟಂತೆ ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ವಶಕ್ಕೆ ಕೊಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಸಮುದಾಯದವರು ಜಮಾಯಿಸಿ ಹೈಡ್ರಾಮಾ ನಡೆಸಿದ್ದಾರೆ.

ಪೊಲೀಸರ ಮೇಲೆಯೇ ಕಲ್ಲು ತೂರಾಟ ಆರೋಪ: ಈ ವೇಳೆ ಪೊಲೀಸರು ಠಾಣೆಯಿಂದ ಹೋಗುವಂತೆ ಎಷ್ಟೇ ಸೂಚಿಸಿದರೂ ಕದಲದ ಕಾರಣ ಜಮಾವಣೆಗೊಂಡ ಜನರನ್ನ ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar