ಸ್ಪರ್ಧಿಗೆ ಈ ರೀತಿ ಪ್ರಶ್ನೆ ಕೇಳಿ ಟೀಕೆಗೆ ಗುರಿಯಾದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

‘ಬೀರ್ ಬೈಸೆಪ್ಸ್’ ಎಂದೂ ಕರೆಯಲ್ಪಡುವ ಖ್ಯಾತ ಯೂಟ್ಯೂಬರ್ ಮತ್ತು ಪಾಡ್‌ಕಾಸ್ಟ್‌ ನಿರೂಪಕ ರಣವೀರ್ ಅಲ್ಲಾಬಾಡಿಯಾ ಅವರು ಹಾಸ್ಯನಟ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮದಲ್ಲಿ ಆಡಿದ ಮಾತಿಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ಶೋದಲ್ಲಿ ಕಾಣಿಸಿಕೊಂಡ ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಯೊಬ್ಬನ ಬಳಿ ಪೋಷಕರ ಲೈಂಗಿಕ ಜೀವನದ ಬಗ್ಗೆ ತಮಾಷೆಯಾಗಿ ಪ್ರಶ್ನೆ ಮಾಡಿದ್ದನ್ನು ಅನೇಕರು ಖಂಡಿಸಿದ್ದಾರೆ. ಇನ್ನು ಈ ವಿಡಿಯೊ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇಂಡಿಯಾಸ್ ಗಾಟ್ ಲೇಟೆಂಟ್‍ನ ಇತ್ತೀಚಿನ ಸಂಚಿಕೆಯಲ್ಲಿ ಸಮಯ್ ರೈನಾ, ಆಶಿಶ್ ಚಂಚ್ಲಾನಿ, ಅಪೂರ್ವ ಮುಖಿಜಾ ಅಕಾ ದಿ ರೆಬೆಲ್ ಕಿಡ್ ಮತ್ತು ಇತರರೊಂದಿಗೆ ತೀರ್ಪುಗಾರನಾಗಿ ರಣವೀರ್ ಕಾಣಿಸಿಕೊಂಡಿದ್ದರು

ರಣವೀರ್‌ ಸ್ಪರ್ಧಿಯೊಬ್ಬನ ಬಳಿ ಪೋಷಕರ ಲೈಂಗಿಕ ಜೀವನದ ಕುರಿತು ಕೇಳಿದ ಪ್ರಶ್ನೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸಮಯ್‌ ರೈನಾ ಕೂಡ ರಣವೀರ್‌ ಪ್ರಶ್ನೆ ಶಾಕ್‌ ಆಗಿದ್ದಾರೆ. ʼʼರಣವೀರ್‌ಗೆ ಏನಾಗಿದೆ…?” ಎಂದು ಕಾರ್ಯಕ್ರಮದ ಇನ್ನೊಬ್ಬ ತೀರ್ಪುಗಾರ ಕೇಳಿದ್ದಾರೆ. ಸೋಶಿಯಲ್ ಮಿಡಿಯಾದವರು ರಣವೀರ್‌ ಮೇಲೆ ಕಿಡಿಕಾರಿದ್ದಾರೆ.

ರಣವೀರ್ ಅಲ್ಲಾಬಾಡಿಯಾ ಅವರ ಈ ಕೊಳಕು ‘ಜೋಕ್’ ತುಂಬಾ ಅಸಹ್ಯಕರವಾಗಿದ್ದು, ಇದು ಭಾರೀ ಆಕ್ರೋಶ ಹುಟ್ಟು ಹಾಕಿದೆ.

ಅಮೆರಿಕದ ಮಿಲಿಯನೇರ್ ಬ್ರಿಯಾನ್ ಜಾನ್ಸನ್‌ ಅವರು ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಅವರ ಪಾಡ್​​ಕಾಸ್ಟ್‌ ಸಂದರ್ಶನ ನೀಡಲು ಭಾರತಕ್ಕೆ ಆಗಮಿಸಿದ್ದರು. ಆದರೆ ಸಂದರ್ಶನದ ಮಧ್ಯೆಯೇ ಬ್ರಿಯಾನ್‌ ಎದ್ದು ಹೊರ ನಡೆದಿದ್ದು ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ನಿಖಿಲ್‌ ಕಾಮತ್‌ ತಮ್ಮ ಪಾಡ್‌ಕಾಸ್ಟ್‌ನಿಂದಲೇ ಜನಪ್ರಿಯರಾಗಿದ್ದಾರೆ. ನರೇಂದ್ರ ಮೋದಿ ಸೇರಿದಂತೆ ದೇಶ ಮತ್ತು ವಿದೇಶದ ಹಲವು ಗಣ್ಯರನ್ನು ಅವರು ಸಂದರ್ಶನ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!