ಸಂಜೆ ಹೊತ್ತು ಏನಾದರೂ ಖಾರವಾದ ತಿಂಡಿ ತಿನ್ಬೇಕು ಅಂತ ಆಸೆ ಇರುತ್ತೆ ಅಲ್ವಾ? ಅಂತಹ ಸಮಯದಲ್ಲಿ ಸ್ವಲ್ಪ ಗರಂ ಆಗಿರೋ, ಮಸಾಲ ರುಚಿ ತುಂಬಿರೋ ಮಶ್ರೂಮ್ ಪೆಪ್ಪರ್ ಫ್ರೈ ಬೆಸ್ಟ್ ಆಯ್ಕೆ. ಕಾಫಿ ಅಥವಾ ಚಹಾ ಜೊತೆಗೆ ಈ ಸಿಂಪಲ್ ಫ್ರೈ ಬಹುಪಾಲು ಜನರಿ ತಿನ್ನೋಕೆ ತುಂಬಾ ಇಷ್ಟ.
ಬೇಕಾಗುವ ಪದಾರ್ಥಗಳು
ಮಸಾಲಾ ಪುಡಿಗೆ:
1 ಚಮಚ ಮೆಣಸು
½ ಟೀಸ್ಪೂನ್ ಸೋಂಪು
½ ಟೀಸ್ಪೂನ್ ಜೀರಿಗೆ
½ ಟೀಸ್ಪೂನ್ ಕೊತ್ತಂಬರಿ ಬೀಜ
ಇತರ ಪದಾರ್ಥಗಳು:
2 ಚಮಚ ತುಪ್ಪ / ಬೆಣ್ಣೆ
1 ಟೀಸ್ಪೂನ್ ಸಾಸಿವೆ
2 ಒಣಗಿದ ಕೆಂಪು ಮೆಣಸಿನಕಾಯಿ
ಕರಿಬೇವು ಎಲೆಗಳು
1 ಇಂಚಿನ ಶುಂಠಿ , ಸಣ್ಣಗೆ ಹೆಚ್ಚಿದ್ದು
½ ಈರುಳ್ಳಿ , ಕತ್ತರಿಸಿದ್ದು
300 ಗ್ರಾಂ ಅಣಬೆ
½ ಕ್ಯಾಪ್ಸಿಕಂ , ಹೋಳುಗಳಾಗಿ ಕತ್ತರಿಸಿದ್ದು
½ ಟೀಸ್ಪೂನ್ ಉಪ್ಪು
ಮಾಡುವ ವಿಧಾನ:
ಮೊದಲಿಗೆ, ಒಂದು ಸಣ್ಣ ಮಿಕ್ಸಿ ಜಾರ್ ನಲ್ಲಿ ಮೆಣಸು, ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ಬೀಜ ಹಾಕಿ ನೀರು ಸೇರಿಸದೆ ಪುಡಿಮಾಡಿಕೊಳ್ಳಿ.
ಈಗ ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಸಾಸಿವೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವು ಎಲೆ, ಶುಂಠಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. ನಂತರ ಮಶ್ರೂಮ್ ಸೇರಿಸಿ ಮತ್ತು ಹೆಚ್ಚಿನ ಉರಿಯಲ್ಲಿ ಹುರಿಯಿರಿ. ಮಶ್ರೂಮ್ ನೀರು ಬಿಟ್ಟ ನಂತರ ಕ್ಯಾಪ್ಸಿಕಂ, ಪುಡಿಮಾಡಿಕೊಂಡ ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಮಶ್ರೂಮ್ ಪೆಪ್ಪರ್ ಫ್ರೈ ರೆಡಿ.