ಸಾಮಾಗ್ರಿಗಳು
ಈರುಳ್ಳಿ
ಒಣಮೆಣಸು
ಬೆಳ್ಳುಳ್ಳಿ
ಶುಂಠಿ
ಕಾಯಿ
ಕಡ್ಲೆ
ಶೇಂಗಾ
ಹುಣಸೆಹುಳಿ
ಕೊತ್ತಂಬರಿ
ಕರಿಬೇವು
ಉಪ್ಪು
ಹಸಿಮೆಣಸು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಹಸಿಮೆಣಸು, ಒಣಮೆಣಸು,ಈರುಳ್ಳಿ ಹಾಕಿ ಬಾಡಿಸಿ
ನಂತರ ಮಿಕ್ಸಿಗೆ ಕಾಯಿ, ಕಡ್ಲೆ, ಶೇಂಗಾ, ಕೊತ್ತಂಬರಿ, ಕರಿಬೇವು, ಶುಂಠಿ, ಬೆಳ್ಳುಳ್ಳಿ ಹಾಗೂ ಹುಣಸೆಹುಳಿ ನಂತರ ಹಸಿಮೆಣಸು ಹಾಗೂ ಉಪ್ಪು ಹಾಕಿ ರುಬ್ಬಿ
ಗಟ್ಟಿ ಚಟ್ನಿ ಮಾಡಿಕೊಂಡು ಅದಕ್ಕೆ ನೀರು ಹಾಕಿದ್ರೆ ನೀರು ಚಟ್ನಿ ರೆಡಿ. ಇಷ್ಟ ಇದ್ದಲ್ಲಿ ಒಗ್ಗರಣೆ ಕೂಡ ಹಾಕ್ಬೋದು.