ಯುವ್ವಿಕಾಸ್ ಸಮಾವೇಶ | ದಕ್ಷಿಣ ಕನ್ನಡ ಸಾರ್ಥಕತೆಯ ಸಹಕಾರದ ನಾಡು: ಚೌಟ

ಹೊಸದಿಗಂತ ವರದಿ ಸುಳ್ಯ:

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕಛೇರಿ ಹಾಗೂ ಸುಂದರ ಭಾರತ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಯುವ್ವಿಕಾಸ್ ಸಮಾವೇಶ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ .ಕು.ಭಾಗೀರಥಿ ಮುರುಳ್ಯ ವಹಿಸಿದ್ದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ದಕ್ಷಿಣ ಕನ್ನಡ ಸಾರ್ಥಕತೆಯ ಸಹಕಾರದ ನಾಡು , ಇಲ್ಲಿನ ಯುವ ಜನತೆಗೆ ಬ್ಯಾಕ್ ಟು ಊರು ಎಂಬ ಅಭಿಯಾನದಲ್ಲಿ ಹೊರದೇಶದಲ್ಲಿ ಇದ್ದ ಉದ್ಯಮಿಗಳ ಕಂಪನಿಗಳನ್ನು ಮಂಗಳೂರಿಗೆ ತಂದು ಸ್ಥಾಪಿಸಲು 1300 ಕೋಟಿ ಹೂಡಿಕೆ ನಡೆಸಲು ಸಾಧ್ಯವಾಗಿದೆ. ನಮ್ಮ ಕರಾವಳಿ ಉದ್ಯಮ ಶೀಲತೆ ಮಣ್ಣಿನ ಗುಣವಾಗಿದೆ ಅಲ್ಲದೇ ಯಾವುದೇ ಕಾರಣಕ್ಕೂ ಉದ್ಯಮ ಶೀಲತೆ ಕಲಿಸಿ ಕೊಡಬೇಕಿಲ್ಲ ಅವರಿಗೆ ಪ್ರೋತ್ಸಾಹದ ಮಾತುಗಳು ಬೇಕಾಗಿದೆ ಎಂದು ಹೇಳಿದರು.

ಸಮಾವೇಶದ ವೇದಿಕೆಯಲ್ಲಿ ಸುಂದರ ಭಾರತ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ. ಪರಾಶರ್ , ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ರಾಜಣ್ಣ , ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ ಉಪಸ್ಥಿತರಿದ್ದರು. ಸುಂದರ ಭಾರತ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ. ಪರಾಶರ್ ಸ್ವಾಗತಿಸಿ ಕೋಲ್ಚಾರ್ ಸರಕಾರಿ ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯ 115 ಸರಕಾರಿ ಶಾಲೆಗಳ ವಿಧ್ಯಾರ್ಥಿಗಳಿಗೆ 50,000 ಪುಸ್ತಕಗಳನ್ನು ವಿತರಿಸಲಾಯಿತು. ಬಳಿಕ ಯುವಕರಿಗೆ ಉದ್ಯೋಗ ಉದ್ದಿಮೆಯ ಅವಕಾಶಗಳು ಸಾಧ್ಯತೆಗಳ ಬಗ್ಗೆ ಹರೀಶ್ , ಪ್ರಸನ್ನ , ಮಹಾಂತೇಶ್ , ಶ್ರೀವತ್ಸ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!