ಮರಿಯಾನೆಗೆ ಆನೆ ಕುಟುಂಬದ Z ಪ್ಲಸ್ ಭದ್ರತೆ: ಅದ್ಭುತ ದೃಶ್ಯಕ್ಕೆ ಮನಸೋತ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ತಮಿಳುನಾಡಿನ ಅಣ್ಣಾಮಲೈ ಅಭಯಾರಣ್ಯದಲ್ಲಿ ಆನೆಗಳ ಕುಟುಂಬ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಆನೆಗಳ ಒಗ್ಗಟ್ಟು, ಮರಿಗಳ ರಕ್ಷಣೆ, ಆರೈಕೆ, ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

ಈ ವಿಡಿಯೋದಲ್ಲಿ ವಿಶ್ರಾಂತಿ ವೇಳೆ ಮರಿ ಆನೆಗೆ Z ಪ್ಲಸ್ ಭದ್ರತೆ ನೀಡಿದೆ. ಸುತ್ತಲು ತಾಯಿ ಆನೆ ಹಾಗೂ ಆನೆ ಕುಟುಂಬ ಮಲಗಿದ್ದರೆ, ಮಧ್ಯದಲ್ಲಿ ಮರಿ ಆನೆ ಮಲಗಿದೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಹಂಚಿಕೊಂಡಿದ್ದಾರೆ. 15 ಸೆಕೆಂಡ್‌ಗಳ ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ.ಅದ್ಭುತ ಹಾಗೂ ಪ್ರಾಣಿಗಳ ಜೀವನ ಪದ್ಧತಿಯ ಈ ವಿಡಿಯೋ ಇದೀಗ ದೇಶಾದ್ಯಂತ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮೂರು ಆನೆಗಳು ನಡುವಿನಲ್ಲಿ ಮರಿಯಾನೆ ಮಲಗಿದೆ. ಮತ್ತೊಂದು ಆನೆ ನಿಂತು ಗಮನಿಸುತ್ತಿದೆ. ಎಲ್ಲರೂ ನಿದ್ರಿಸಿದರೂ ಒಂದು ಆನೆ ಮಾತ್ರ ನಿಂತುಕೊಂಡೆ ಎಲ್ಲರನ್ನು ಕಾಯುತ್ತಿದೆ. ಕಾರಣ ಅಣ್ಣಾಮಲೈ ಅಭಯಾರಣ್ಯ ಪ್ರಮುಖವಾಗಿ ಹುಲಿ ಸಂರಕ್ಷಿತ ಅರಣ್ಯವಾಗಿದೆ. ಮರಿ ಆನೆಗಳ ಮೇಲೆ ಹುಲಿ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಮಧ್ಯದಲ್ಲಿ ಮರಿ ಆನೆಯನ್ನು ಮಲಗಿಸಿರುವ ಆನೆ ಕುಟುಂಬ ಸುತ್ತಲೂ ಮಲಗಿದೆ.

ಇಷ್ಟೇ ಅಲ್ಲ,ಒಂದು ಆನೆ ನಿದ್ದೆಯಲ್ಲಿ ಕಾಲನ್ನು ಎತ್ತಿ ಪಕ್ಕದಲ್ಲಿ ಮಲಗಿರುವ ಆನೆಯನ್ನು ಪರಿಶೀಲಿಸುತ್ತಿದೆ. ಬಳಿ ಮತ್ತೆ ಆರಾಮಾಗಿ ನಿದ್ರಿಸುತ್ತಿದೆ.

ಈ ವಿಡಿಯೋವನ್ನು ಸುಪ್ರಿಯಾ ಸಾಹು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬಗಳ ರೀತಿಯಲ್ಲೇ ಮರಿ ಆನೆಯನ್ನು ಸುರಕ್ಷಿತವಾಗಿ ಮಲಗಿಸಿದೆ. ಜೊತೆಗೆ ಮಲಗಿದ್ದ ಸ್ಥಳದಿಂದಲೇ ಇತರರನ್ನುಕಾಲಿನ ಮೂಲಕ ಪರಿಶೀಲಿಸುತ್ತಿದೆ. ಆನೆ ಕುಟುಂಬ ಮರಿಯಾನೆಗೆ ಝೆಡ್ ಪ್ಲಸ್ ಭದ್ರತೆ ನೀಡಿದೆ ಎಂದು ಸುಪ್ರಿಯಾ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!