ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಿತ್ಯ ಒಂದೊಂದು ರೋಚಕ ಸತ್ಯ ಹೊರ ಬರುತ್ತಿದೆ. ಆದರೆ ಇದೀಗ ಧಾರಾವಾಹಿಯ ವಿಲನ್ ಬಗ್ಗೆ ಗೊಂದಲ ಶುರುವಾಗಿದೆ.
ಹೌದು, ಒಮ್ಮೆ ಝೇಂಡೇ ಹಾಗೂ ಆರ್ಯ ಇಬ್ಬರೂ ವಿಲನ್ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ, ಕೆಲವು ಸಲ ಝೇಂಡೇ ಮಾತ್ರನೇ ವಿಲನ್ ಎಂಬಂತೆ ಕಾಣುತ್ತಿದೆ.
ಝೇಂಡೇ ಅನು ವನ್ನು ಕೊಲ್ಲಲು ಪ್ಲಾನ್ ಮಾಡಿ ಫೇಲ್ ಆಗುತ್ತಾನೆ. ಇತ್ತ ಆರ್ಯನಿಗೆ ಗುಂಡೇಟು ತಗುಲಿದ್ದರಿಂದ ಝೇಂಡೇ ಭಯ ಪಟ್ಟಿದ್ದಾನೆ. ಹೇಗೆ ಎಲ್ಲರನ್ನೂ ಎದುರಿಸುವುದು ಎಂಬ ಭಯದಲ್ಲಿ ಊರಿಂದ ಆಚೆ ಹೋಗಿದ್ದಾನೆ.
ಇತ್ತ ಆರ್ಯ, ಝೇಂಡೇಯನ್ನು ಹುಡುಕಿಕೊಂಡು ಹೋಗಿದ್ದಾನೆ.ಅವನ ಹಿಂದೆ ಅನು ಹೋಗಿದ್ದಾಳೆ. ಇದರಿಂದ ಹರ್ಷವರ್ಧನ್ ಅನು ಬಗ್ಗೆ ಯೋಚಿಸುತ್ತಿದ್ದು, ಅನು ಒಬ್ಬಳೇ ಆರ್ಯನನ್ನು ಹುಡುಕಿಕೊಂಡು ಹೋಗಿದ್ದು ಏನು ಆಗುತ್ತೆ ಎಂಬ ಆತಂಕ ಶುರುವಾಗಿದೆ.
ಅನು ಜೊತೆ ಮೀರಾ ಕೂಡ ತೆರಳಿದ್ದು, ಜೋಗ್ತವ್ವ ಹೇಳಿದ ಮಾರ್ಗದಲ್ಲಿ ಹುಡುಕಾಡುತ್ತಿದ್ದಾರೆ. ಹೀಗೆ ಹುಡುಕಾಡುತ್ತಾ ಇವರು ಝೇಂಡೇ ಮನೆ ಬಳಿ ಬಂದಿದ್ದು, ಇಬ್ಬರೂ ಒಟ್ಟಿಗೇನೇ ಇರುತ್ತಾರೆ ಎಂದು ತಿಳಿದು ಬಂದಿದ್ದಾರೆ. ಆದರೆ ಸ್ಥಳ ನೋಡಿ ಮೀರಾ ಇಲ್ಲಿಂದ ಹೋಗೋಣ ಬಾ ಎಂದು ಬಲವಂತದಿಂದ ಅನು ವನ್ನು ಕರೆದುಕೊಂಡು ಹೋಗುತ್ತಾಳೆ.
ಆದರೆ ಅನುಗೆ ಅರ್ಯನ ನೋಡದೆ ಹೋಗಲು ಮನಸ್ಸು ಕೇಳುತ್ತಿರಲಿಲ್ಲ. ಇತ್ತ ಮೀರಾ ಎಷ್ಟು ಹೇಳಿದರೂ ಕೇಳೋದಿಲ್ಲ. ಆರ್ಯ ಸರ್ ಇಲ್ಲೇ ಇದ್ದಾರೆ. ಅದು ನನಗೆ ಫೀಲ್ ಆಗುತ್ತಿದೆ. ಅವರು ಇಲ್ಲೇ ಎಲ್ಲೋ ಇದ್ದಾರೆ ಎಂದು ಅನು ಹೇಳುತ್ತಾಳೆ. ನನಗೆ ಆರ್ಯ ಸರ್ ಇಪ್ಪತ್ತು ವರ್ಷದಿಂದ ಗೊತ್ತು. ಅವರ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೀನಿ ಎಂದು ವಿಚಿತ್ರವಾಗಿ ಮಾತನಾಡುತ್ತಾಳೆ. ಗಾಬರಿಯಾಗುವ ಮೀರಾ ಅನುಳನ್ನು ಅಲ್ಲಿಂದ ಕರೆದುಕೊಂಡು ಹೋಗಲು ಮುಂದಾಗುತ್ತಾಳೆ.
ಈ ಕಡೆ ಝೇಂಡೇ ಎಲ್ಲರಿಂದ ದೂರ ತಪ್ಪಿಸಿಕೊಂಡಿದ್ದು, ತನ್ನ ಚೇಳಗಳಿಗೆ ಆರ್ಯವರ್ಧನ್‌ನನ್ನು ಫಾಲೋ ಮಾಡುವಂತೆ ಹೇಳಿದ್ದಾನೆ. ಆರ್ಯ ಮನೆಯಿಂದ ಹೊರಟವನೇ ಸೀದಾ, ಝೇಂಡೇ ಮನೆ ಬಳಿ ಬಂದು ಅಳುತ್ತಾ ಕುಳಿತಿರುತ್ತಾನೆ. ಆರ್ಯನ ಕಾರನ್ನು ಆಕ್ಸಿಡೆಂಟ್ ಮಾಡಿಸುವಂತೆ ಝೇಂಡೇ ಸೂಚಿಸುತ್ತಾನೆ. ಇದರ ಹಿಂದೆ ಝೇಂಡೇ ದೊಡ್ಡ ಪ್ಲಾನ್ ಒಂದನ್ನು ಇಟ್ಟುಕೊಂಡಿದ್ದಾನೆ.