June 20, 2026
Saturday, June 20, 2026
spot_img

ಮೈಸೂರು, ಕರಾವಳಿಯಲ್ಲಿ ಜೀರೋ ಪೊಲ್ಯೂಷನ್: ಉತ್ತರ ಕರ್ನಾಟಕದ ಜನರಿಗೆ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ತಂಪು ಗಾಳಿಯಿಂದಾಗಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದೆ. ವಾತಾವರಣದಲ್ಲಿದ್ದ ಧೂಳಿನ ಕಣಗಳು ಸಂಪೂರ್ಣವಾಗಿ ಮರೆಯಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ (AQI) ‘ಉತ್ತಮ’ ಹಾಗೂ ‘ತೃಪ್ತಿಕರ’ ಮಟ್ಟ ತಲುಪಿದೆ.

ಸಿಲಿಕಾನ್ ಸಿಟಿಯಲ್ಲಿ ಗ್ರೀನ್ ಜೋನ್!

ಬೆಂಗಳೂರಿನ ಪ್ರಮುಖ ವಲಯಗಳಾದ ಹೆಬ್ಬಾಳ, ಸಿಲ್ಕ್ ಬೋರ್ಡ್, ಜಯನಗರ ಮತ್ತು ಮೈಸೂರು ರಸ್ತೆಗಳಲ್ಲಿ ಸದ್ಯ ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ. ಯಾವುದೇ ಆರೋಗ್ಯದ ಅಪಾಯಗಳಿಲ್ಲದ ಕಾರಣ, ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಕೂಡ ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ಮೈಸೂರು ಮತ್ತು ಕರಾವಳಿಯಲ್ಲಿ ಶೂನ್ಯ ಮಾಲಿನ್ಯ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಗಾಳಿ ದಾಖಲಾಗಿದ್ದರೆ, ಕರಾವಳಿ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಮಾಲಿನ್ಯದ ಮಟ್ಟ ಶೂನ್ಯಕ್ಕೆ ಕುಸಿದಿದೆ. ಬಳ್ಳಾರಿ, ಕೊಪ್ಪಳ ಹಾಗೂ ಮಂಗಳೂರು ಭಾಗಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು, ಸಂಪೂರ್ಣ ಸುರಕ್ಷಿತವಾಗಿದೆ.

ಉತ್ತರ ಕರ್ನಾಟಕದ ಜನರಿಗೆ ಮುನ್ನೆಚ್ಚರಿಕೆ

ಆದಾಗ್ಯೂ, ಉತ್ತರ ಕರ್ನಾಟಕದ ಕೆಲವು ಕೈಗಾರಿಕಾ ಪ್ರದೇಶಗಳಲ್ಲಿ ಧೂಳಿನ ವಾತಾವರಣ ಹೆಚ್ಚಿರುವುದರಿಂದ ಗಾಳಿಯ ಗುಣಮಟ್ಟ ಸ್ವಲ್ಪ ‘ಕಳಪೆ’ (Poor) ಮಟ್ಟದಲ್ಲಿದೆ. ಹೀಗಾಗಿ, ಅಲರ್ಜಿ ಅಥವಾ ಉಸಿರಾಟದ ಸಮಸ್ಯೆ ಇರುವವರು ಅಗತ್ಯ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ವರದಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !