ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 6 ರಿಂದ ಜಿಂಬಾಬ್ವೆ , ಭಾರತ ನಡುವೆ ಐದು ಟಿ 20 ಸರಣಿ ಆರಂಭಗೊಳ್ಳಲಿದ್ದು, ಇದಕ್ಕಾಗಿ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ಸೋಮವಾರ (ಜುಲೈ 1) ತನ್ನ ತಂಡವನ್ನು ಪ್ರಕಟಿಸಿದೆ.
ಅನುಭವಿ ಆಲ್ರೌಂಡರ್ ಸಿಕಂದರ್ ರಾಜಾ ಅವರನ್ನು ಜಿಂಬಾಬ್ವೆ ತಂಡದ ನಾಯಕರನ್ನಾಗಿ ಘೋಷಿಸಲಾಗಿದೆ. ತಂಡದಲ್ಲಿ ಬೆಲ್ಜಿಯಂ ಮೂಲದ ಆಟಗಾರ ಅಂಟಮ್ ನಖ್ವಿ ಕೂಡ ಸೇರಿಕೊಂಡಿದ್ದಾರೆ.
ಭಾರತ ವಿರುದ್ಧದ ಸರಣಿಯಲ್ಲಿ ನಖ್ವಿಯ ಭಾಗವಹಿಸುವಿಕೆ ಅವರ ಪೌರತ್ವದ ಸ್ಥಾನಮಾನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಲ್ಜಿಯಂನ ಬ್ರಸೆಲ್ನಲ್ಲಿ ಪಾಕಿಸ್ತಾನಿ ಪೋಷಕರಿಗೆ ಜನಿಸಿದ್ದರು ನಖ್ವಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ಜಿಂಬಾಬ್ವೆಯನ್ನು ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು.
ಜಿಂಬಾಬ್ವೆ ತಂಡ: ಸಿಕಂದರ್ ರಾಜಾ (ನಾಯಕ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್ಬೆಲ್ ಜೋನಾಥನ್, ಚಟಾರಾ ತೆಂಡೈ, ಜೊಂಗ್ವೆ ಲ್ಯೂಕ್, ಕೈಯಾ ಇನ್ನೋಸೆಂಟ್, ಮದಂಡೆ ಕ್ಲೈವ್, ಮಡ್ವೆರೆ ವೆಸ್ಲಿ, ಮಾವುಮಣಿ ತಡಿವಾನಾಶೆ, ಮಸಕಡ್ಜಾ ವೆಲ್ಲಿಂಗ್ಟನ್, ಮಾವುಟಾ ಬ್ರಾಂಡನ್, ಮುಜರಬಾನಿ ಬ್ಲೆಸ್ಸಿಂಗ್, ಮೈಯರ್ಸ್ ಡಿಯೋನ್, ನಖ್ವಿ ಅಂಟಮ್, ಎನ್ಗರವಾ ರಿಚರ್ಡ್, ಶುಂಬಾ ಮಿಲ್ಟನ್.