March 26, 2026
Thursday, March 26, 2026
spot_img

ಮದ್ಯಪಾನ ಮಾಡಿ, ಲೈಫ್ ಜಾಕೆಟ್ ಇಲ್ಲದೆ ಈಜಲು ತೆರಳಿದ್ದೇ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪಾನ ಮಾಡಿ, ಲೈಫ್ ಜಾಕೆಟ್ ಇಲ್ಲದೆ ಈಜಲು ತೆರಳಿದ್ದೇ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್

ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ಬಗ್ಗೆ ಹರಿದಾಡುತ್ತಿದ್ದ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸಿಂಗಾಪುರ ಕೋರ್ಟ್ ಈ ಪ್ರಕರಣವನ್ನು ‘ದುರದೃಷ್ಟಕರ ಮುಳುಗುವಿಕೆ’ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ:

2025ರ ಸೆಪ್ಟೆಂಬರ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಈಶಾನ್ಯ ಭಾರತ ಉತ್ಸವಕ್ಕೆ ಭಾಗವಹಿಸಲು ತೆರಳಿದ್ದ ಗಾರ್ಗ್, ಕಾರ್ಯಕ್ರಮಕ್ಕೂ ಮುನ್ನವೇ ಮೃತಪಟ್ಟಿದ್ದರು. ತನಿಖೆ ಪ್ರಕಾರ, ಅವರು ಲಾಜರಸ್ ದ್ವೀಪದತ್ತ ಬೋಟ್‌ನಲ್ಲಿ ತೆರಳಿ, ಬಳಿಕ ನೀರಿಗೆ ಇಳಿದು ಈಜಲು ಮುಂದಾಗಿದ್ದರು.

ಸಾಕ್ಷಿದಾರರ ಹೇಳಿಕೆಯಂತೆ, ಮದ್ಯಪಾನ ಮಾಡಿದ್ದ ಗಾರ್ಗ್ ಲೈಫ್ ಜಾಕೆಟ್ ಧರಿಸದೆ ಈಜಲು ಮುಂದಾಗಿದ್ದು, ಸ್ನೇಹಿತರ ಮನವಿಯನ್ನೂ ಲೆಕ್ಕಿಸಿಲ್ಲ. ವರದಿಯಲ್ಲಿ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿರುವುದು ಇದನ್ನು ದೃಢಪಡಿಸಿದೆ.

ಈ ಹಿನ್ನೆಲೆಯಲ್ಲಿ ಯಾವುದೇ ಸಂಚು ಅಥವಾ ಅನುಮಾನಾಸ್ಪದ ಅಂಶಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !