October 10, 2026
Saturday, October 10, 2026
spot_img

CINE | ಮ್ಯಾಚೋ ಪಾತ್ರಗಳು ಇಮ್ರಾನ್ ಖಾನ್ ಗೆ ಇಷ್ಟವಾಗಲ್ವಂತೆ: ಇಂಡೈರೆಕ್ಟ್ ಆಗಿ ಟಾಂಟ್ ಇಟ್ಟಿದ್ದು ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ಸಿನಿಮಾಗಳಲ್ಲಿ ಕಾಣಿಸುತ್ತಿರುವ ಹಿಂಸಾತ್ಮಕ ಹಾಗೂ ‘ಮ್ಯಾಚೋ’ ಹೀರೋ ಇಮೇಜ್ ಬಗ್ಗೆ ಬಾಲಿವುಡ್ ನಟ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಉದ್ದ ಕೂದಲು, ಕೋಪಭರಿತ ಮುಖ, ರಕ್ತಸಿಕ್ತ ಲುಕ್ ಇರುವ ಪಾತ್ರಗಳು ನನಗೆ ಇಷ್ಟವಿಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ.

‘ಆಸ್ಕ್ ಮೀ ಎನಿಥಿಂಗ್’ ಸೆಷನ್ ವೇಳೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಪಾತ್ರಗಳು ಸಿನಿಮಾಗಳಲ್ಲಿ ಅತಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇತ್ತೀಚಿನ ಕೆಲವು ಚಿತ್ರಗಳಲ್ಲಿ ಹಿಂಸೆ ಮತ್ತು ತೀವ್ರ ಪುರುಷತ್ವವನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ಸಿನಿಮಾಗಳಲ್ಲಿ ಹಾಗೂ ಸಮಾಜದಲ್ಲಿ ಸ್ತ್ರೀದ್ವೇಷ ಮತ್ತು ವಿಷಕಾರಿ ಪುರುಷತ್ವವನ್ನು ಪ್ರಚಾರ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಅವರ ಈ ಹೇಳಿಕೆಗಳನ್ನು ಹಲವರು ಕೆಜಿಎಫ್ 2, ಅನಿಮಲ್ ಹಾಗೂ ಧುರಂಧರ್ 2 ಚಿತ್ರಗಳಿಗೆ ಸಂಬಂಧಿಸಿ ಚರ್ಚಿಸುತ್ತಿದ್ದಾರೆ. ಈ ಸಿನಿಮಾಗಳಲ್ಲಿ ಹೀರೋಗಳ ಆಕ್ರಮಣಕಾರಿ ರೂಪ, ಉದ್ದ ಕೂದಲು ಮತ್ತು ರಕ್ತಸಿಕ್ತ ದೃಶ್ಯಗಳು ಹೆಚ್ಚು ಗಮನ ಸೆಳೆದಿವೆ.

ಇಮ್ರಾನ್ ಖಾನ್ ಹೇಳಿಕೆ ಇದೀಗ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಹೀರೋಗಳ ಚಿತ್ರಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹುಟ್ಟುಹಾಕಿದೆ.

Must Read