ಇಂದು ಭಾರತ-ಸೌತ್ ಆಫ್ರಿಕಾ ಮೊದಲ ಏಕದಿನ ಮ್ಯಾಚ್ ಗೆ ವರುಣನ ಎಂಟ್ರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಮೊದಲ ಏಕದಿನ ಸರಣಿಯು ನಡೆಯಲಿದ್ದು, ಜೋಹಾನ್ಸ್​​ಬರ್ಗ್​ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ.

ಹವಾಮಾನ ವರದಿ ಪ್ರಕಾರ, ಭಾನುವಾರ ಜೋಹಾನ್ಸ್​ಬರ್ಗ್​ನ ಸುತ್ತ ಮುತ್ತ ಮಳೆಯಾಗಲಿದೆ. ಹೀಗಾಗಿ ಮೊದಲ ಏಕದಿನ ಪಂದ್ಯಕ್ಕೆ ಅಡಚಣೆಯುಂಟಾಗಬಹುದು ಎನ್ನಲಾಗುತ್ತಿದೆ.

ಜೋಹಾನ್ಸ್‌ಬರ್ಗ್‌ನಲ್ಲಿ ಬೆಳಿಗ್ಗೆ ಗುಡುಗು ಸಹಿತ ಬಿರುಗಾಳಿ ಇರಲಿದೆ. ಅಲ್ಲದೆ 51 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಆದರೆ ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ತಿಳಿಗೊಳ್ಳಲಿದ್ದು, 27 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಲಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೂ ಮ್ಯಾಚ್ ನಡೆಯುವುದು ಖಚಿತ ಎನ್ನಬಹುದು.

ಒಂದು ವೇಳೆ ಮಳೆಯಿಂದಾಗಿ ಪಂದ್ಯ ಆರಂಭವಾಗಲು ವಿಳಂಬವಾದರೆ ಓವರ್​ಗಳ ಕಡಿತದೊಂದಿಗೆ ಮ್ಯಾಚ್ ನಡೆಯಲಿದೆ. ಅಂದರೆ ಫಲಿತಾಂಶ ನಿರ್ಧರಿಸಲು ತಲಾ ಕನಿಷ್ಠ 20 ಓವರ್​ಗಳ ಪಂದ್ಯವನ್ನು ನಿರೀಕ್ಷಿಸಬಹುದು.

ಸೌತ್ ಆಫ್ರಿಕಾ ತಂಡ: ರೀಝ ಹೆಂಡ್ರಿಕ್ಸ್, ಟೋನಿ ಡಿ ಜೊರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್ , ನಾಂದ್ರೆ ಬರ್ಗರ್, ತಬ್ರೇಝ್ ಶಮ್ಸಿ, ಲಿಝಾಡ್ ವಿಲಿಯಮ್ಸ್, ವಿಯಾನ್ ಮುಲ್ಡರ್, ಒಟ್ನಿಯೆಲ್ ಬಾರ್ಟ್‌ಮ್ಯಾನ್, ಮಿಹ್ಲಾಲಿ ಎಂಪೊಂಗ್ವಾನಾ, ಕೈಲ್ ವೆರ್ರೆನ್ನೆ.

ಭಾರತ ತಂಡ: ರಜತ್ ಪಾಟಿದಾರ್, ಸಾಯಿ ಸುದರ್ಶನ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್, ಅವೇಶ್ ಖಾನ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಯುಜ್ವೇಂದ್ರ ಚಹಲ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಆಕಾಶ್ ದೀಪ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!