ಕಲಾ ನಿರ್ದೇಶಕನ ನಿಧನ: ‘ಒಎಂಜಿ 2’ ಟ್ರೇಲರ್​ ಬಿಡುಗಡೆ ಮುಂದೂಡಿದ ಅಕ್ಷಯ್​ ಕುಮಾರ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಕಲಾ ನಿರ್ದೇಶಕ ನಿತಿನ್​ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು , ತಮ್ಮದೇ ಸ್ಟುಡಿಯೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಗಿದ್ದು, . ಅವರ ನಿಧನಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಟ ಅಕ್ಷಯ್​ ಕುಮಾರ್​ ಕೂಡ ನಿತಿನ್​ ದೇಸಾಯಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದು, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ‘ಒಎಂಜಿ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಮುಂದೂಡಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ಅಕ್ಷಯ್​ ಕಮಾರ್​ ಅವರು ಈ ವಿಷಯವನ್ನು ತಿಳಿಸಿದ್ದಾರೆ.

‘ನಿತಿನ್​ ದೇಸಾಯಿ ಅವರ ನಿಧನವನ್ನು ನಂಬಲಾಗುತ್ತಿಲ್ಲ. ಪ್ರೊಡಕ್ಷನ್​ ಡಿಸೈನ್​ನಲ್ಲಿ ಅವರು ಪ್ರಮುಖ ವ್ಯಕ್ತಿ ಆಗಿದ್ದರು. ನಮ್ಮ ಚಿತ್ರರಂಗದ ದೊಡ್ಡ ಭಾಗವಾಗಿದ್ದರು. ನನ್ನ ಅನೇಕ ಸಿನಿಮಾಗಳಿಗೂ ಅವರು ಕೆಲಸ ಮಾಡಿದ್ದರು. ಅವರು ನಿಧನದಿಂದ ದೊಡ್ಡ ನಷ್ಟ ಉಂಟಾಗಿದೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ನಾವು ಇಂದು ಒಎಂಜಿ 2 ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡುತ್ತಿಲ್ಲ. ನಾಳೆ (ಆಗಸ್ಟ್​ 3) ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡುತ್ತೇವೆ. ಓಂ ಶಾಂತಿ’ ಎಂದು ಅಕ್ಷಯ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!