Wednesday, October 8, 2025

ಕುತೂಹಲ ಹೆಚ್ಚಿಸಿದೆ ‘ಮಾಸ್ಕ್ ಮ್ಯಾನ್’ ನಡೆ: ಸರ್ಪಗಾವಲಿನಲ್ಲಿ ಪಾಯಿಂಟ್ 13 ಬಗೆಯಲು ಎಸ್ ಐಟಿ ಸಿದ್ದತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಎಸ್ ಐಟಿ ನೇತೃತ್ವದ ಸಮಾಧಿ ಶೋಧ ಕಾರ್ಯ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ದೂರುದಾರ ಅನಾಮಿಕ ವ್ಯಕ್ತಿ ಗುರುತಿಸಿರುವ 13 ಸ್ಥಳಗಳ ಪೈಕಿ ಕೊನೆಯ ಸ್ಥಳದಲ್ಲಿ ಇಂದು ಶೋಧ ಕಾರ್ಯ ಮುಂದುವರಿದಿದೆ.

ಈ ಸ್ಥಳವು ರಸ್ತೆ ಪಕ್ಕದಲ್ಲಿಯೇ ಇರುವ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರು, ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ.

ಪಾಯಿಂಟ್ 13ರಲ್ಲಿ ತಾನು 8 ಶವ ಹೂತಿದ್ದೇನೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ಶೋಧ ಕಾರ್ಯ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

ಈ ಹಿಂದೆ ಪಾಯಿಂಟ್ 11ರ ಬದಲು ಅನಾಮಿಕ ತೋರಿಸಿದ್ದ ಬಂಗ್ಲೆಗುಡ್ಡೆಯ ಹೊಸ ಸ್ಥಳದಲ್ಲಿ ಕೂಡಾ ಇಂದು ಮತ್ತೆ ಶೋಧ ಕಾರ್ಯ ನಡೆದಿರುವುದು ಕುತೂಹಲ‌ ಕೆರಳಿಸಿದೆ.

error: Content is protected !!