ಕೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರನ್ನು ಹೀಗೆಲ್ಲ ಕರೆಯುವಂತಿಲ್ಲ: ನ್ಯಾಯಾಧೀಶರಿಗೆ ಸುಪ್ರೀಂಕೋರ್ಟ್ ನಿಂದ ಕೈಪಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಪ್ರೀಂಕೋರ್ಟ್ ಇಂದು ಲಿಂಗ ಅಸಮಾನತೆಯನ್ನು ಸೂಚಿಸುವ ಪದಗಳು ಮತ್ತು ವಾಕ್ಯಗಳನ್ನು ಪಟ್ಟಿ ಮಾಡಿರುವ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ. ನ್ಯಾಯಾಲಯದ ಆದೇಶಗಳಲ್ಲಿ ಈ ಪದಗಳನ್ನು ಬಳಸದಂತೆ ನ್ಯಾಯಾಧೀಶರುಗಳಿಗೆ ಎಚ್ಚರಿಕೆ ನೀಡಿದೆ.

‘ಹ್ಯಾಂಡ್ ಬುಕ್ ಆನ್ ಕಂಬಾಟಿಂಗ್ ಜೆಂಡರ್ ಸ್ಟಿರಿಯೋಟೈಪ್ಸ್’ ಬಿಡುಗಡೆ ಮಾಡಿರುವ ಸಜೆಐ ಡಿವೈ ಚಂದ್ರಚೂಡ್, ಈ ಹಿಂದೆ ನ್ಯಾಯಾಲಯಗಳ ತೀರ್ಪುಗಳಲ್ಲಿ ಮಹಿಳೆಯರ ಕುರಿತು ಅನೇಕ ನಿಂದನಾತ್ಮಕ ಪದಗಳನ್ನು ಬಳಸಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಈ ಪದಗಳು ಅನುಚಿತವಾಗಿವೆ ಮತ್ತು ಕೋರ್ಟ್ ತೀರ್ಪುಗಳಲ್ಲಿ ಮಹಿಳೆಯರ ವಿರುದ್ಧಬಳಸಲಾಗುತ್ತಿದೆ. ಈ ಕೈಪಿಡಿಯು ಅಂತಹ ತೀರ್ಪುಗಳನ್ನು ಟೀಕಿಸುವುದಿಲ್ಲ ಅಥವಾ ಅನುಮಾನಿಸುವುದಿಲ್ಲ. ಲಿಂಗ ಅಸಮಾನತೆಯನ್ನು ಹೇಗೆ ನಡೆಸಲಾಗುತ್ತಿದೆ ಎಂಬುದನ್ನು ಇದು ವಿಷದಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಧೀಶರು ಮತ್ತು ವಕೀಲರು ಯಾವ ಪದಗಳು ಸಾಂಪ್ರದಾಯಿಕವಾಗಿವೆ ಮತ್ತು ಅವುಗಳನ್ನು ಹೇಗೆ ತಪ್ಪಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ವಾದಗಳನ್ನು ಮಾಡವಾಗ, ಆದೇಶಗಳನ್ನು ನೀಡಲು ಮತ್ತು ಅದರ ಪ್ರತಿಗಳನ್ನು ತಯಾರಿಸಲು ಅವುಗಳನ್ನು ಬಳಸಬಹುದು. ಈ ಕೈಪಿಡಿ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ಸಹಾಯವಾಗಲಿದೆ. ಈ ಕೈಪಿಡಿಯು ಹಿಂದೆ ನ್ಯಾಯಾಲಯಗಳು ಬಳಸಿದ ಪದಗಳನ್ನು ಒಳಗೊಂಡಿದೆ. ತೀರ್ಪಿನಲ್ಲಿ ಅಂಥ ಪದಗಳು ಬಳಸಿದ್ದು ಹೇಗೆ ತಪ್ಪು ಇದರಿಂದ ನ್ಯಾಯ ಅವರ ಪಾಲಿಗೆ ಹೇಗೆ ತಪ್ಪಿದಂತಾಗಿ ಎನ್ನುವುದನ್ನೂ ವಿವರಿಸಲಾಗಿದೆ.

ಈ ಕೈಪಿಡಿಯನ್ನು ಸಿದ್ಧಪಡಿಸುವ ಉದ್ದೇಶವು ಯಾವುದೇ ನಿರ್ಧಾರವನ್ನು ಟೀಕಿಸುವುದು ಅಥವಾ ಅನುಮಾನಿಸುವುದಲ್ಲ. ಸ್ತ್ರೀಯರ ವಿರುದ್ಧ ಆಕ್ಷೇಪಾರ್ಹ ಭಾಷೆಯ ಬಳಕೆಯನ್ನು ನ್ಯಾಯಾಲಯಗಳು ತಪ್ಪಿಸಬಹುದು, ಅದರಿಂದಾಗುವ ಹಾನಿಯೇನು ಎಂಬುದನ್ನು ವಿವರಿಸುವುದು ನ್ಯಾಯಾಲಯದ ಉದ್ದೇಶವಾಗಿದೆ. ಇದನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಅಪ್‌ಲೋಡ್ ಮಾಡಲಾಗುವುದು ಎಂದಿದ್ದಾರೆ.

ಸಿಜೆಐ ಚಂದ್ರಚೂಡ್ ಅವರು ನೀಡಿರುವ ಕಾನೂನು ಪರಿಭಾಷೆಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ನೇತೃತ್ವದ ಸಮಿತಿ ಸಿದ್ಧಪಡಿಸಿದೆ. ಸಮಿತಿಯು ನಿವೃತ್ತ ನ್ಯಾಯಮೂರ್ತಿಗಳಾದ ಪ್ರಭಾ ಶ್ರೀದೇವನ್ ಮತ್ತು ಜಸ್ಟಿಸ್ ಗೀತಾ ಮಿತ್ತಲ್ ಮತ್ತು ಪ್ರೊಫೆಸರ್ ಜುಮಾ ಸೇನ್ ಅವರನ್ನು ಒಳಗೊಂಡಿತ್ತು. ಜುಮಾ ಸೆನ್‌, ಪ್ರಸ್ತುತ ಕೋಲ್ಕತ್ತಾದ ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ಸದಸ್ಯರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!