ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ರಾಜಕೀಯ ಬದಲಾವಣೆಗಳ ನಡುವೆಯೇ ಯುಕೆಯ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಗ್ರಾಹಕ ಬೆಲೆಗಳು 10.1ಶೇಕಡಾದಷ್ಟು ಏರಿಕೆಯಾಗಿದೆ. ಅಲ್ಲದೇ ಆಹಾರ ಮತ್ತು ಇಂಧನ ಬೆಲೆಗಳು ಹಿಂದೆಂದಿಗಿಂತಲೂ ಗರಿಷ್ಟ ಮಟ್ಟವನ್ನು ತಲುಪಿದೆ. ಸಿರಿಧಾನ್ಯಗಳು, ಹಾಲು ಮತ್ತು ಚೀಸ್‌ನ ಬೆಲೆಯು ಇಂಧನ ಬಿಲ್‌ಗಳು ಮತ್ತು ಸಾರಿಗೆ ವೆಚ್ಚಗಳು ಏರಿಕೆ ಕಂಡಿವೆ. ಸಮೀಕ್ಷೆಯೊಂದರ ಪ್ರಕಾರ ಸುಮಾರು 85% ಜನರು ಈಗ ಹೆಚ್ಚುತ್ತಿರುವ ಜೀವನ ವೆಚ್ಚದ ಬಗ್ಗೆ ಚಿಂತಿತರಾಗಿದ್ದಾರೆ.
ಇವೆಲ್ಲವುಗಳ ನಡುವೆ ಯುಕೆಯ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ರಾಜೀನಾಮೆ ನೀಡಿದ್ದು ಟ್ರಸ್ ಆಡಳಿತದಿಂದ ಹೊರ ನಡೆದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ತನ್ನ ವೈಯಕ್ತಿಕ ಇಮೇಲ್‌ನಿಂದ ಅಧಿಕೃತ ದಾಖಲೆಯನ್ನು ಕಳುಹಿಸಿದ ನಂತರ ಲಿಜ್ ಟ್ರಸ್ ಅವರ ಸರ್ಕಾರಕ್ಕೆ ಸುಯೆಲ್ಲಾ ಬ್ರಾವರ್‌ಮನ್ ರಾಜೀನಾಮೆ ನೀಡಿದ್ದಾರೆ