January14, 2026
Wednesday, January 14, 2026
spot_img

ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಹೆಚ್ಚು ಉತ್ಸಾಹದ ದಿನ.  ಕಾರ್ಯದಲ್ಲಿ ಸಫಲತೆ. ಸಣ್ಣ ವಿಷಯ ಗಂಭೀರವಾಗಿ ಪರಿಗಣಿಸಿ ಮನಸ್ಸು ಹಾಳು ಮಾಡಿ ಕೊಳ್ಳದಿರಿ.
ವೃಷಭ
ಯಾರ ಮನಸ್ಸನ್ನೂ ಒಲಿಸಬಲ್ಲ ಕಲೆ ನಿಮಗೆ ಕರಗತ. ಇದು ನಿಮ್ಮ ವ್ಯವಹಾರವನ್ನು ಸುಲಲಿತಗೊಳಿಸಲಿದೆ. ಆರ್ಥಿಕ ಸ್ಥಿತಿ ಉನ್ನತಿ.
ಮಿಥುನ
ಕಠಿಣವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಸಾಧ್ಯ. ಪ್ರೀತಿಪಾತ್ರರ ಜತೆ ಹೆಚ್ಚು ಸಮಯ ಕಳೆಯಿರಿ. ಖರ್ಚು ನಿಯಂತ್ರಣ.
ಕಟಕ
ಕೆಲಸದ ಒತ್ತಡದಿಂದ ಹೊರಬಂದು ಆನಂದ ಅನುಭವಿಸಿರಿ. ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ.
ಸಿಂಹ
ಗುರಿ ಸಾಧನೆಗೆ ಕೆಲವರು ಅಡ್ಡಗಾಲು ಹಾಕಲು ಯತ್ನಿಸುವರು. ಅವರನ್ನು ದೂರವಿಡಿ. ಖರ್ಚು ಕಡಿಮೆ ಮಾಡಲು ಮೊದಲು ಗಮನ ಕೊಡಿ.
ಕನ್ಯಾ
ಕಾಯುತ್ತಿರುವ ಅವಕಾಶವೊಂದು ಇಂದು ಸಿಗುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕೌಟುಂಬಿಕ ಸಹಕಾರ.
ತುಲಾ
ಹೊಸ ವ್ಯವಹಾರಕ್ಕೆ ಈಗಲೆ ಕೈಹಾಕದಿರಿ. ವಿಘ್ನಗಳು ಕಾಡಬಹುದು. ಕೌಟುಂಬಿಕ ಸಮಸ್ಯೆ ಸೌಹಾರ್ದದಿಂದ ಪರಿಹಾರ ಕಾಣಲಿದೆ.
ವೃಶ್ಚಿಕ
ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಯಾರನ್ನೂ ಕುರುಡಾಗಿ ನಂಬದಿರಿ. ಬಂಧುಗಳ ಸಹಕಾರ.
ಧನು
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಮೊದಲಿಗೆ ಇತ್ಯರ್ಥ ಮಾಡಿಕೊಳ್ಳಿ. ಅದನ್ನು ಬೆಳೆಯಲು ಬಿಡಬೇಡಿ. ಟೀಕೆಗೆ ಎರವಾಗುವಿರಿ.
ಮಕರ
ಹೆಚ್ಚು ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಇದರಿಂದ ಅನಗತ್ಯ ಮಾನಸಿಕ ನೋವು ತಿನ್ನುವುದು ತಪ್ಪಲಿದೆ. ಕೌಟುಂಬಿಕ ಅಶಾಂತಿ ನಿವಾರಣೆ.
ಕುಂಭ
ನಿಮ್ಮ ಸಾಮರ್ಥ್ಯ ಎಲ್ಲರ ಗಮನಕ್ಕೆ ಬರುವ ಪ್ರಸಂಗ ಒದಗುವುದು. ಧೈರ್ಯದಿಂದ ಮುಂದೆ ಹೆಜ್ಜೆ ಇಡಿ.  ಜಗತ್ತೇ ನಿಮಗೆ ತಲೆ ಬಾಗುವುದು.
ಮೀನ
ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತನ್ನಿರಿ. ಇದರಿಂದ ಕೆಲವಾರು ಸಮಸ್ಯೆ ಪರಿಹಾರವಾಗಲಿದೆ. ಸಾಂಸಾರಿಕ ಸೌಹಾರ್ದ.

Most Read

error: Content is protected !!