ದಿನಭವಿಷ್ಯ: ಇಂದು ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತಸದ ಸುದ್ದಿ, ಕಾಯುತ್ತಿರಿ..

ಮೇಷ.
ದೈನಂದಿನ ಕೆಲಸಕ್ಕೆ ಸಣ್ಣ ಅಡ್ಡಿ ಬಂದೀತು. ಕೆಲವರ ಅಸಹಕಾರ ನಿಮ್ಮ ಮನಸ್ಸು ಮುದುಡಿಸುವುದು. ಧೃತಿಗೆಡದಿರಿ.
ವೃಷಭ
ದಿನವಿಡೀ ವಿರಾಮವಿಲ್ಲದೆ ದುಡಿಯುವಿರಿ. ಪ್ರತಿಕೂಲ ಪರಿಸ್ಥಿತಿಯಿಂದ ಹತಾಶೆ ಕಾಡಬಹುದು. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಿ.
ಮಿಥುನ
ಬಿಡುವಿಲ್ಲದ ಕಾರ್ಯ. ಇದರಿಂದ ಕೌಟುಂಬಿಕ ಆದ್ಯತೆ ಹಿನ್ನೆಲೆಗೆ ಸರಿಯಬಹುದು. ಮನೆಯವರ ಅಸಂತೃಪ್ತಿ ಎದುರಿಸುವಿರಿ.
ಕಟಕ
ಹೊಸ ವ್ಯವಹಾರ ಈಗಲೆ ಆರಂಭಿಸದಿರಿ. ತುಸು ಕಾಯಿರಿ. ಸಹಕಾರ ನೀಡಬೇಕಾದ ವ್ಯಕ್ತಿಗಳು ಹಿಂದೆ ಸರಿಯಬಹುದು.  ಆರ್ಥಿಕ  ಒತ್ತಡ ಹೆಚ್ಚು.
ಸಿಂಹ
ಯಾವುದೋ ಪ್ರಮುಖ ಕಾರ್ಯ ನಿಮ್ಮ ತಲೆ ತಿನ್ನಲಿದೆ. ಸರಿಯಾಗಿ ನಿಭಾಯಿಸದೆ ಸಮಸ್ಯೆ.  ಸಹಕಾರ ಪಡೆದು ಮುನ್ನಡೆಯಿರಿ.
ಕನ್ಯಾ
ಪೂರಕವೆಂದು ಕಂಡ ವಿಷಯ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಹಾಗಾಗಿ, ಎಚ್ಚರ ವಹಿಸಿ. ಎಲ್ಲರನ್ನು ನಂಬಿ ಕೆಡಬೇಡಿ.
ತುಲಾ
ದಿನವು ಸುಗಮವಾಗಿ ಸಾಗಿದರೂ ಅಂತ್ಯದಲ್ಲಿ ಅತೃಪ್ತಿಯೊಂದು ಉಳಿಯಲಿದೆ. ಅದು ನಿಮ್ಮ ಮನಸ್ಥಿತಿಗೆ ಸಂಬಂಧಿಸಿದ್ದು.  ಧ್ಯಾನ ಸಹಕಾರಿ.
ವೃಶ್ಚಿಕ
ನಿಮ್ಮ ಕಾರ್ಯಕ್ಕೆ ಉಂಟಾಗಿದ್ದ ವಿಘ್ನ ನಿವಾರಣೆ. ಬಂಧುಗಳ ಸಹಕಾರ. ಮನಸ್ತಾಪ ನಿವಾರಣೆ. ಒಟ್ಟಿನಲ್ಲಿ ನಿರಾಳತೆ ಮೂಡಲಿದೆ.
ಧನು
ಮನೆಯವರ ಹಿತಾಸಕ್ತಿಗೆ ಯೋಜನೆ ಹಾಕಲು ಸಕಾಲ. ಎಲ್ಲವೂ ನಿಮಗೆ ಪೂರಕವಾಗಿ ಪರಿಣಮಿಸಲಿದೆ. ಆರ್ಥಿಕ ಉನ್ನತಿ ಉಂಟಾಗಲಿದೆ.
ಮಕರ
ಕಾರ್ಯಸಾಧನೆಗೆ ಕೆಲವರ ಅಸಹಕಾರ. ಮಾತಿನ ಚಕಮಕಿ ನಡೆದೀತು. ಸಹನೆ ಕಾಯ್ದುಕೊಳ್ಳಬೇಕು. ಕೌಟುಂಬಿಕ ನೆಮ್ಮದಿ.
ಕುಂಭ
ಕೌಟುಂಬಿಕ ಶಾಂತಿ, ಸಮಾಧಾನ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ವೃತ್ತಿಯಲ್ಲಿ ತುಸು ಏರುಪೇರು ಎದುರಿಸುವಿರಿ. ತಾಳ್ಮೆಯಿಂದ ವರ್ತಿಸಿ.
ಮೀನ
ಉತ್ಸಾಹದ ದಿನ. ಯಾವುದೇ ಪ್ರತಿಕೂಲ ಬಾಽಸದು. ಹಾಗಿದ್ದರೂ ನಿಮಗೆ ಸಮಾಧಾನ ಇರಲಾರದು. ಏನೋ ಚಿಂತೆ ಕಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!