January14, 2026
Wednesday, January 14, 2026
spot_img

ದಿನಭವಿಷ್ಯ: ಈ ಹಿಂದೆ ಆಗಿರುವ ಲಾಸ್‌ ಎಲ್ಲವೂ ಇಂದು ಲಾಭವಾಗಿ ಬದಲಾಗಲಿದೆ

ಮೇಷ
ಇತ್ತೀಚಿನ ನಿಮ್ಮ ಕೆಲವು ನಷ್ಟಗಳನ್ನು ಸರಿದೂಗಿಸುವ ರೀತಿಯಲ್ಲಿ ಇಂದು ಲಾಭ ಗಳಿಸುತ್ತೀರಿ. ಬಂಧುಗಳಿಂದ ತುಸು ಕಿರಿಕಿರಿ.
ವೃಷಭ
ಸಾಹಸದ ಪ್ರವೃತ್ತಿ ನಿಮ್ಮನ್ನು ದುಸ್ಸಾಹಸಕ್ಕೆ ಪ್ರೇರೇಪಿಸಬಹುದು. ಎಚ್ಚರ ವಹಿಸಿ. ಉದ್ಯೋಗ ದಲ್ಲಿ ಕಿರಿಕಿರಿ. ಸಹೋದ್ಯೋಗಿಗಳ ಅಸಹಕಾರ.
ಮಿಥುನ
ಆಹಾರದ ವಿಷಯದಲ್ಲಿ ಜಾಗ್ರತೆ ಇರಲಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಸಂಭವ.
ಕಟಕ
ಉದ್ವಿಗ್ನತೆ ಅಧಿಕ. ಕೌಟುಂಬಿಕ ಸಮಸ್ಯೆ. ಅದನ್ನು ಪರಿಹರಿಸಲು ಅವರೊಡನೆ ಸೂಕ್ತ ಸಮಾಲೋಚನೆ ನಡೆಸುವುದೇ ಸೂಕ್ತ ದಾರಿ.
ಸಿಂಹ
ವಿವಿಧ ದಿಕ್ಕು ಗಳಿಂದ ಒತ್ತಡ ಅನುಭವಿ ಸುತ್ತೀರಿ. ಮುಖ್ಯವಾಗಿ ನಿಮ್ಮ ಖಾಸಗಿ ಬದುಕಿನ ಮೇಲೆ ಇದು ಪರಿಣಾಮ ಬೀರುವುದು.
ಕನ್ಯಾ
ನಿಚ್ಚಳ ಮನಸ್ಸಿನಿಂದ ಮಾಡಿದ  ಕಾರ್ಯ ಸಿದ್ಧಿ. ಗೊಂದಲಗಳು ಬೇಡ. ಕೌಟುಂಬಿಕ ಸಂಕಷ್ಟ ಪರಿಹಾರ. ಇಷ್ಟ ದೇವರ ಪ್ರಾರ್ಥನೆ ಮಾಡಿ.
ತುಲಾ
ಗಂಭೀರ ಕಾರ್ಯ ಮಾಡಲು ಇಂದು ಮನಸ್ಸಿಲ್ಲ. ನಿಮ್ಮ ಇಂದಿನ ಕಾರ್ಯ ನಾಳೆಗೆ ಪರಿಣಾಮ ಬೀರಲಿದೆ. ವಿವೇಚನೆಯಿರಲಿ.
ವೃಶ್ಚಿಕ
ಯಾವುದೇ ಕಾರ್ಯವನ್ನು ಯೋಜಿಸಿ ನಡೆಸಿ. ಖರೀದಿಯಲ್ಲೂ ಎಚ್ಚರವಿರಲಿ. ಕಿಸೆ ಖಾಲಿಯಾದೀತು. ಕೌಟುಂಬಿಕ ಹೊರೆ ಅಽಕ.
ಧನು
ಏಕಕಾಲದಲ್ಲಿ ವಿವಿಧ ಬಗೆಯ ಚಿಂತೆಗಳು ಕಾಡ ಬಹುದು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿ ಕೊಂಡು ನಡೆಯುವುದೇ ಅದಕ್ಕೆ ಸೂಕ್ತ ಪರಿಹಾರ.
ಮಕರ
ಮನಸ್ಸು ಸಂತೋಷ ಗೊಳ್ಳಲು ಸಾಮಾಜಿಕ ಕಾರ್ಯದಲ್ಲಿ ತೊಡಗಿ. ಎಲೆಕ್ಟ್ರಾನಿಕ್ ವಸ್ತು ಖರೀದಿಗೆ ಇಂದು ದಿನ ಸೂಕ್ತವಾಗಿದೆ.
ಕುಂಭ
ನಿಮ್ಮ ದೈನಂದಿನ ಗುರಿ ಈಡೇರಿಕೆಗೆ  ಗಮನ ಕೊಡಿ. ಅದರಿಂದ ಎಲ್ಲವೂ ಸುಸೂತ್ರವಾಗುತ್ತದೆ. ಸುತ್ತಲಿರುವವರ ಜತೆ ತಿಕ್ಕಾಟ ತಪ್ಪಿಸಿ.
ಮೀನ
ನೀವಿಂದು ನಿಮ್ಮ ಕಾಳಜಿಯ ವಿಷಯ ಗಳತ್ತ ಪ್ರಮುಖವಾಗಿ ಗಮನ ಹರಿಸಬೇಕು. ನಿಮ್ಮ ವ್ಯಕ್ತಿತ್ವದಲ್ಲಿ, ವರ್ತನೆಯಲ್ಲಿ ಬದಲಾವಣೆ ತರಬೇಕು.

Most Read

error: Content is protected !!