February 24, 2026
Tuesday, February 24, 2026
spot_img

ದಿನಭವಿಷ್ಯ: ಕಚೇರಿಯಲ್ಲಿ ಬಿಗುವಿನ ವಾತಾವರಣ, ಸ್ವಲ್ಪ ಸಮಾಧಾನ ಇರಲಿ

ಮೇಷ
ಕಚೇರಿಯಲ್ಲಿ ಬಿಗುವಿನ ವಾತಾವರಣ. ಸಮಾಧಾನದಿಂದ ವ್ಯವಹರಿಸಿ.  ಹೊಂದಾಣಿಕೆ ಇರಲಿ. ವಾಗ್ವಾದಕ್ಕೆ ಇಳಿಯಬೇಡಿ.
ವೃಷಭ
ಪ್ರಮುಖ ಕಾರ್ಯ ನಿಮ್ಮ ಇಚ್ಛೆಯಂತೆ ನೆರವೇರುವುದು. ವ್ಯವಹಾರದಲ್ಲಿ ಉನ್ನತಿ. ಕೌಟುಂಬಿಕ ಸೌಹಾರ್ದ.  ಆರ್ಥಿಕ ಒತ್ತಡ.
ಮಿಥುನ
ಸಂತೋಷ, ಸಮಾಧಾನದ ದಿನ. ನೀವು ನಿರೀಕ್ಷಿಸಿದ ಕಾರ್ಯ ಈಡೇರಿಕೆ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಕೌಟುಂಬಿಕ ಸೌಹಾರ್ದ.
ಕಟಕ
ಕೆಲವು ವಿಷಯ ಮನಸ್ಸಿನಲ್ಲಿ ಕೊರಗು ಮೂಡಿಸುವುದು. ಅದನ್ನು ಆಪ್ತರ ಜತೆ ಹಂಚಿಕೊಂಡರೆ ನಿರಾಳವಾದೀತು.
ಸಿಂಹ
ನಿಮ್ಮ ಸಾಮರ್ಥ್ಯದ ಅಭಿವ್ಯಕ್ತಿಗೆ ಅವಕಾಶ ಸಿಗುವುದು. ಆರ್ಥಿಕ ಸ್ಥಿರತೆ. ಬಂಧುಗಳ ಜತೆ ವಿರಸ ಸಂಭವ. ಸಂಯಮ ಪಾಲಿಸಿರಿ. ಧನವ್ಯಯ.
ಕನ್ಯಾ
ಯಶಸ್ಸಿಗೆ ಅಡ್ಡದಾರಿ ಹಿಡಿಯದಿರಿ. ಪ್ರತಿಕೂಲ ಪರಿಣಾಮ ಉಂಟಾದೀತು. ಹಿಂದೆ ಮಾಡಿದ ತಪ್ಪು ಈಗ ಕಾಡಬಹುದು.
ತುಲಾ
ಎಲ್ಲ ವಿಷಯದಲ್ಲಿ  ನಿಮಗೆ ಇಂದು ಯಶಸ್ಸು ಸಿಗಲಿದೆ. ಆಪ್ತರ ಜತೆಗಿನ ವಿರಸ ನಿವಾರಣೆ. ವ್ಯವಹಾರದಲ್ಲಿ ಉನ್ನತಿ, ಆರ್ಥಿಕ ಲಾಭ.
ವೃಶ್ಚಿಕ
ಮನೆಯಲ್ಲಿ ನೆಮ್ಮದಿ. ನಿಮ್ಮ ಸಾಧನೆ ಇತರರನ್ನು ಪ್ರಭಾವಿಸುತ್ತದೆ. ಅವಿವಾಹಿತರಿಗೆ ಸಂಬಂಧ ಕೂಡಿಬಂದೀತು.   ಬಂಧುಗಳ ಭೇಟಿ.
ಧನು
ನಿರಾಳ ದಿನ. ಹೆಚ್ಚು ಕಾರ್ಯದೊತ್ತಡ ಇರಲಾರದು. ಕುಟುಂಬ ಸದಸ್ಯರ ಸಂಗಡ ಕಾಲ ಕಳೆಯುವ ಅವಕಾಶ. ಆರ್ಥಿಕ ಸ್ಥಿತಿ ಉತ್ತಮ.
ಮಕರ
ಸಂವಹನದ ಕೊರತೆಯಿಂದ ಆಪ್ತರ ಜತೆ ಭಿನ್ನಾಭಿಪ್ರಾಯ. ತಪ್ಪು ಗ್ರಹಿಕೆ ನೀಗಲು ಆದ್ಯತೆ ಕೊಡಿ. ಸಂಘರ್ಷಕ್ಕೆ ಅವಕಾಶ ಕೊಡದಿರಿ.
ಕುಂಭ
ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಮೌನವಾಗಿ ಸಹಿಸ ಬೇಕಾಗುವುದು. ಆರ್ಥಿಕ ಒತ್ತಡ ನಿವಾರಣೆ.
ಮೀನ
ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಸಂಭವ.ಸಮಾಧಾನದಿಂದ ನಿಭಾಯಿಸಿ. ಕೋಪತಾಪ ಒಳಿತಲ್ಲ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !