January14, 2026
Wednesday, January 14, 2026
spot_img

ದಿನಭವಿಷ್ಯ: ಸಂಸಾರದಲ್ಲಿ ತುಂಬಾ ಸಮಯದಿಂದ ಇದ್ದ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ

ಮೇಷ
ಶುಭಪ್ರದ ದಿನ.   ಹಳೆ  ಸಮಸ್ಯೆ ಪರಿಹಾರ. ವೃತ್ತಿಯಲ್ಲಿ ಹೊಸ ಭರವಸೆ. ಬಂಧುಮಿತ್ರರ ಸಮ್ಮಿಲನ. ಪ್ರೀತಿಯ ವಿಷಯದಲ್ಲಿ ಬೆಳವಣಿಗೆ.
ವೃಷಭ
ಮನೆಯಲ್ಲಿ ನಲಿವಿನ ವಾತಾವರಣ. ಯಾವುದೇ ಸಣ್ಣ ವಿಷಯ ಸಂತೋಷ ಹಾಳು ಮಾಡಲು ಅವಕಾಶ ಕೊಡಬೇಡಿ. ಸಹನೆಯಿಂದ ವರ್ತಿಸಿ.
ಮಿಥುನ
ನೆಮ್ಮದಿ ಕಲಕುವ ಹಳೆಯ ವಿಷಯ ಹೂತುಬಿಡಿ. ಅದನ್ನು ಮತ್ತೆ ಎತ್ತಬೇಡಿ. ಭವಿಷ್ಯಕ್ಕೆ ಗಮನ ಕೊಡಿ. ಮನೆಯವರ ಸಹಕಾರ.
ಕಟಕ
ಗಂಭೀರವೆಂದು ಭಾವಿಸಿದ ವಿಷಯ ನೀವು ತಿಳಿದಷ್ಟು ಗಂಭೀರವಲ್ಲ. ಸುಲಭದಲ್ಲೆ ಎಲ್ಲವೂ ಇತ್ಯರ್ಥ ಕಾಣಲಿದೆ. ಪ್ರಯತ್ನ ಮುಖ್ಯ.
ಸಿಂಹ
ಹಳೆಯ ಸಮಸ್ಯೆ ಮತ್ತೆ ಉದ್ಭವಿಸಬಹುದು. ಮನಸ್ಸಿನ ನೆಮ್ಮದಿ ಕದಡಬಹುದು. ವಿವೇಕದಿಂದ ಯೋಚಿಸಿ ನಿರ್ಧಾರ ತಾಳಿರಿ.
ಕನ್ಯಾ
ಭಾವನಾತ್ಮಕ ಪ್ರಸಂಗ ಎದುರಿಸುವಿರಿ. ಆಪ್ತರನ್ನು ಭೇಟಿಯಾಗುವ ಅವಕಾಶ.  ಕಹಿಮಾತು ಆಡದಿರಿ. ಇತರರ ಭಾವನೆಗೆ ನೋವುಂಟು ಮಾಡದಿರಿ.
ತುಲಾ
ಹದಗೆಟ್ಟ ಸಂಬಂಧ ಸುಧಾರಿಸಲು ಆದ್ಯತೆ ಕೊಡಿ. ಮನೆಮಂದಿಯ ಸಹಕಾರ ಸಿಗಲಿದೆ. ಉದ್ದಿಮೆಯಲ್ಲಿ ಪೂರಕ ವಾತಾವರಣ.
ವೃಶ್ಚಿಕ
ಸಾಂಸಾರಿಕ ಸಮಸ್ಯೆ ನಿವಾರಣೆ. ಹೊಸ ಬಿಕ್ಕಟ್ಟಿಗೆ ಅವಕಾಶ ಕೊಡಬೇಡಿ. ಆರ್ಥಿಕ ಉನ್ನತಿ ಸಂತೋಷ ತರಲಿದೆ. ಬಂಧು ಭೇಟಿಯಿಂದ ಆನಂದ.
ಧನು
ಎಲ್ಲರ ಜತೆ ಕೂಡಿ ಕಳೆಯುವ ಅವಕಾಶ. ಆದರೆ ದುಡುಕಿನ ವರ್ತನೆ ತೋರದಿರಿ. ನೆಮ್ಮದಿ ಹಾಳಾದೀತು. ಹೊಂದಾಣಿಕೆ ಮುಖ್ಯ.
ಮಕರ
ಕಾಡುತ್ತಿದ್ದ ಸಮಸ್ಯೆ ಪರಿಹಾರ. ಸಾಂಸಾರಿಕ ವ್ಯವಹಾರದಲ್ಲಿ ಹೆಚ್ಚು ವಿವೇಕ ಪ್ರದರ್ಶಿಸಿ. ದುಡುಕಿನ ಮಾತು ಸಂಬಂಧ ಕೆಡಿಸಬಹುದು.
ಕುಂಭ
ಸಮಸ್ಯೆ ಮರೆತು ಈ ದಿನ ಕಳೆಯುವುದು ನಿಮ್ಮ ಉದ್ದೇಶವಾಗಿರಲಿ. ಸಣ್ಣ ವಿಷಯದಲ್ಲೂ ಸಂತೋಷ ಕಾಣಿರಿ. ಕೌಟುಂಬಿಕ ಮನಸ್ತಾಪ ತಣಿಸಿರಿ.
ಮೀನ
ಹೊಸ ವ್ಯವಹಾರದ ಯೋಜನೆ ಹಾಕಿದ್ದರೆ ಒಳಿತು ಕಾದಿದೆ. ಹಿಂಜರಿಕೆ ಬೇಡ. ಕೌಟುಂಬಿಕ ವಿರಸ ತಣ್ಣಗಾಗಿಸಲು ಹೆಚ್ಚು ಗಮನ ಕೊಡಿ

Most Read

error: Content is protected !!