ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಠಿಗೆ (Divyanka Tripathi) ಅಪಘಾತವಾಗಿದ್ದು (Accident), ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೂಟಿಂಗ್ ವೇಳೆ ಅತೀ ಎತ್ತರದ ಸ್ಥಳದಿಂದ ಬಿದ್ದ ಕಾರಣದಿಂದಾಗಿ ಕಾಲಿನ ಎರಡೂ ಮಣಿಕಟ್ಟುಗಳು ಮುರಿದಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ ಎಂದು ಪತಿ ವಿವೇಕ್ ತಿಳಿಸಿದ್ದಾರೆ.
ಮಧ್ಯ ಪ್ರದೇಶ ಮೂಲದ ದಿವ್ಯಾಂಕ ಕೇವಲ ಕಿರುತೆರೆ ನಟಿ ಮಾತ್ರವಲ್ಲ, ಆಕಾಶವಾಣಿ ಕಲಾವಿದೆ ಕೂಡ ಆಗಿದ್ದಾರೆ. ಅಲ್ಲದೇ ಅನೇಕ ರಿಯಾಲಿಟಿ ಶೋಗಳನ್ನೂ ಅವರು ಭಾಗಿಯಾಗಿದ್ದಾರೆ. ವೆಬ್ ಸಿರೀಸ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.