ಹೊಸದಿಗಂತ ವರದಿ ಬೆಂಗಳೂರು:
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಡುವಿನ ಜಗಳಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ತಲೆದಂಡವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳಿದವರಿಗೆ ಸ್ಥಾನವಿಲ್ಲ. ತಮ್ಮ ಉಚ್ಛಾಟನೆ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಸ್ವತಃ ರಾಜಣ್ಣ ಹೇಳಿಕೊಂಡಿದ್ದಾರೆ. ಅವರ ಆರೋಪ ನೂರಕ್ಕೆ ನೂರು ಸತ್ಯವಾಗಿದೆ.
ರಾಜಣ್ಣ ಎಲ್ಲೋ ನೀಡಿದ ಒಂದು ಹೇಳಿಕೆಯನ್ನು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿವಿಗೆ ಮುಟ್ಟಿಸಿದ್ದಾರೆ. ನಿಮ್ಮದೇ ಮಂತ್ರಿಗಳು ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿ, ರಾಜಣ್ಣ ಅವರ ವಿಕೆಟ್ ಉರುಳಿಸಿದ್ದಾರೆ ಎಂದರು.