ಅಣ್ಣಾ ವಿವಿಯಲ್ಲಿ ಲೈಂಗಿಕ ದೌರ್ಜನ್ಯ | ಸಹೋದರಿಯರ ಸುರಕ್ಷತೆ ಮುಖ್ಯ: ರಾಜ್ಯಪಾಲರನ್ನು ಭೇಟಿಯಾದ ನಟ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತ ಆಕ್ರೋಶದ ನಡುವೆಯೇ, ನಟ-ರಾಜಕಾರಣಿ ವಿಜಯ್ ಅವರು ತಮಿಳುನಾಡು ರಾಜಭವನದ ಬಾಗಿಲು ತಟ್ಟಿದ್ದಾರೆ.

ರಾಜ್ಯಪಾಲ ಆರ್.ಎನ್ ರವಿ ಅವರನ್ನು ಭೇಟಿಯಾದ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವರಿಷ್ಠ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಟಿವಿಕೆ ಪ್ರಕಟಣೆಯ ಪ್ರಕಾರ, ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಎಲ್ಲೆಡೆ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳು, ಫಂಜಾಲ್ ಚಂಡಮಾರುತದ ಪರಿಹಾರಕ್ಕಾಗಿ ಕೇಂದ್ರದ ಹಣವನ್ನು ಬಿಡುಗಡೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠರು ಒತ್ತಾಯಿಸಿದ್ದಾರೆ ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್.ಆನಂದ್ ತಿಳಿಸಿದ್ದಾರೆ.

ತಮ್ಮ ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಪ್ರೀತಿಯ ಸಹೋದರಿಯರೇ ಎಂದು ಬರೆದಿರುವ ಕೈಬರಹದ ಪತ್ರದಲ್ಲಿ, ‘ನಮ್ಮನ್ನು ನಿಯಂತ್ರಿಸುವವರಿಗೆ ನಾವು ಎಷ್ಟು ಬಾರಿ ಕೇಳಿದರೂ ಕೇಳುವುದು ವ್ಯರ್ಥ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿದಿನ ಮಹಿಳೆಯರ ಮೇಲೆ ಸಾಮೂಹಿಕ ದೌರ್ಜನ್ಯಗಳು, ಅವ್ಯವಸ್ಥೆಯ ನಡವಳಿಕೆ ಮತ್ತು ಲೈಂಗಿಕ ಅಪರಾಧಗಳಿಗೆ ಬಲಿಯಾಗುತ್ತಾರೆ. ಅವರ ಸಹೋದರನಾಗಿ ನಾನು ಅವರ ದುಃಖವನ್ನು ನೋಡಿದ ನಂತರ ಖಿನ್ನತೆ ಮತ್ತು ವರ್ಣನಾತೀತ ನೋವು ಅನುಭವಿಸುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಿಂತು ನಿಮ್ಮನ್ನು ಸಹೋದರನಂತೆ ರಕ್ಷಿಸುತ್ತೇನೆ ಎಂದು ವಿಜಯ್ ಭರವಸೆ ನೀಡಿದ್ದಾರೆ.

ಯಾವುದರ ಬಗ್ಗೆಯೂ ಚಿಂತಿಸಬೇಡಿ, ನಿಮ್ಮ ಅಧ್ಯಯನದತ್ತ ಗಮನಹರಿಸಿ. ನಾವು ಸುರಕ್ಷಿತ ತಮಿಳುನಾಡನ್ನು ರಚಿಸುತ್ತೇವೆ. ನಾವು ಇದನ್ನು ಶೀಘ್ರದಲ್ಲೇ ಒಟ್ಟಾಗಿ ಖಚಿತಪಡಿಸುತ್ತೇವೆ ಎಂದು ಬರೆದಿದ್ದಾರೆ.

ಇದೇ ವೇಳೆ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ರಾಜ್ಯಪಾಲರೊಂದಿಗಿನ ವಿಜಯ್ ಅವರ ಭೇಟಿಯನ್ನು ಸ್ವಾಗತಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳ ಪದಾಧಿಕಾರಿಗಳು ಸಹೋದರರಂತೆ ಮುಂದೆ ಬರಬೇಕು ಎಂದು ಅಣ್ಣಾಮಲೈ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!