ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದ (Karnataka Government) ಎಲ್ಲಾ ಇಲಾಖೆಗಳಲ್ಲಿ ಇನ್ಮುಂದೆ ಕ್ರೀಡಾಪಟುಗಳಿಗೆ (Sportsman) ಶೇ 2 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಘೋಷಿಸಿದ್ದಾರೆ.
ಕೋರಮಂಗಲದಲ್ಲಿರುವ ಕೆಎಸ್ಆರ್ಪಿ (KSRP) ಕ್ರೀಡಾಂಗಣದಲ್ಲಿ ನಡೆದ ಪೊಲೀಸ್ ಆರ್ಚರಿ ಚಾಂಪಿಯನ್ಶಿಪ್ ಸಮಾರೋಪದಲ್ಲಿ ವಿಜೇತ ಆರ್ಚರಿ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ರಾಜ್ಯದಲ್ಲಿ ಆರ್ಚರಿ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ. 24 ರಾಜ್ಯಗಳ ಪೊಲೀಸ್ ತಂಡ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಸರ್ಕಾರದಿಂದ ವಿಜೇತರಿಗೆ 25 ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಅಶ್ವದಳ, ಬಾಂಬ್ ನಿಷ್ಕ್ರೀಯ ದಳ, ಗರುಡ ಪಡೆಯಿಂದ ಅಣುಕು ಪ್ರದರ್ಶನ ನಡೆಯಿತು. ಬಾಂಬ್ ಇಟ್ಟಾಗ ಅದನ್ನ ಪತ್ತೆ ಮಾಡಿ ನಿಷ್ಕ್ರೀಯ ಮಾಡಿ ಅಜ್ಞಾತ ಸ್ಥಳದಲ್ಲಿ ಸ್ಪೋಟಿಸುವುದರ ಕುರಿತು, ಬಸ್ ಹೈಜಾಕ್ ಮಾಡಿದಾಗ ಐಎಸ್ಡಿ ಗರುಡ ಪಡೆಯ ಕ್ಷಿಪ್ರ ಕಾರ್ಯಚರಣೆ, ಬಸ್ ಹೈಜಾಕ್ ವೇಳೆ ಶ್ವಾನದಳವೂ ಹೇಗೆ ಕೆಲಸ ಮಾಡುತ್ತೆ ಎಂಬುವುದರ ಬಗ್ಗೆ ಅಣುಕು ಪ್ರದರ್ಶನ ನಡೆಯಿತು.