Monday, March 4, 2024

ಇಂದಿನ ದಿನ ಭವಿಷ್ಯ: ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆ ವ್ಯಕ್ತಪಡಿಸಿ, ಅಂಜಬೇಡಿ!

ಮೇಷ
ನಿಮ್ಮ ಹೊಣೆ ನಿಭಾಯಿಸಲು ಕಷ್ಟ ಪಡುವಿರಿ. ಹತಾಶೆಗೆ ತಳ್ಳುವ ಬೆಳವಣಿಗೆ. ಮನಸ್ಸಿಗೆ ಸಂತೋಷ ಕೊಡುವ ವಿಚಾರದತ್ತ ಗಮನ ಹರಿಸಿ.

ವೃಷಭ
ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆ ವ್ಯಕ್ತಪಡಿಸಿ. ಪೂರಕ ಸ್ಪಂದನೆ ದೊರಕುವುದು. ಕೆಲವು ವಿಷಯ ಮನದಲ್ಲೇ ಇಟ್ಟುಕೊಂಡು ಕೊರಗುತ್ತಿರಬೇಡಿ

ಮಿಥುನ
ಬಾಕಿ ಉಳಿದ ಕಾರ್ಯ ಪೂರೈಸಲು ಗಮನ ಕೊಡಿ. ಹಿನ್ನಡೆಗೆ ಅಂಜಬೇಡಿ. ಕಷ್ಟದ ಕಾರ್ಯವೂ ಸುಗಮವಾಗಿ ಮುಗಿಯುವುದು.

ಕಟಕ
ಇತರರ ಕಷ್ಟಸುಖಕ್ಕೆ ಸ್ಪಂದಿಸುವಿರಿ. ಇದರಿಂದ ಅವರ ಆದರ ಗಳಿಸುವಿರಿ. ಆದರೆ ನಿಮ್ಮ ದೌರ್ಬಲ್ಯ ಇತರರಿಗೆ ತೋರಿಸಬೇಡಿ. ಹಳೆ ನೆನಪು ಕೆದಕುವ ಸ್ನೇಹಿತರ ಭೇಟಿ.

ಸಿಂಹ
ಹೆಚ್ಚಿನ ಆತ್ಮವಿಶ್ವಾಸ. ಕಾರ್ಯದಲ್ಲಿ ಉತ್ಸಾಹ. ಮುಖ್ಯ ಕಾರ್ಯ ಮಾಡುವ ಮುನ್ನ ಅದರ ಸಾಧಕಬಾಧಕ ಯೋಚಿಸಿರಿ. ಕೌಟುಂಬಿಕ ಸಹಕಾರ.

ಕನ್ಯಾ
ಬೆಳಗಿನ ಹೊತ್ತು ಕುಂದಿದ ಮನಸ್ಸು. ಕೆಲಸದಲ್ಲಿ ನಿರಾಸಕ್ತಿ. ಆದರೆ ಬಳಿಕ ನಿಮ್ಮ ಹೊಣೆಯತ್ತ ಗಮನ ಹರಿಸುತ್ತಾ ಉಲ್ಲಾಸ ಪಡೆಯುವಿರಿ.

ತುಲಾ
ಹಲವು ಕೆಲಸಗಳ ಒತ್ತಡ. ಎಲ್ಲವೂ ಸುಲಭ ಎಂದು ನೀವು ಭಾವಿಸಿದರೂ ಅದರ ಕಷ್ಟ ಅರಿವಾಗಲಿದೆ. ಹೊಟ್ಟೆ ಕೆಡುವ ಸಂಭವವಿದೆ. ಮಿತಾಹಾರ ಒಳಿತು.

ವೃಶ್ಚಿಕ
ಸಮಸ್ಯೆಯಿಂದಲೇ ದಿನದ ಆರಂಭ. ಆದರೆ ದಿನಕಳೆದಂತೆ ಸಮಸ್ಯೆ ಪರಿಹಾರ ಕಾಣುವುದು. ದಿನದಂತ್ಯಕ್ಕೆ ತೃಪ್ತಿ, ನಿರಾಳತೆ ಪಡೆಯುವಿರಿ. ಕೌಟುಂಬಿಕ ಶಾಂತಿ.

ಧನು
ನೀವೆದುರಿಸುವ ಪ್ರತಿ ಪರಿಸ್ಥಿತಿಯನ್ನೂ ಸಮಾಧಾನದಿಂದ ನಿಭಾಯಿಸಿ. ತಕ್ಷಣದ ಪ್ರತಿಕ್ರಿಯೆ ತೋರಿ ನಿಮಗೆ ನೀವೇ ಹಾನಿ ತಂದುಕೊಳ್ಳದಿರಿ.

ಮಕರ
ಸಫಲ ದಿನ. ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಬಾಕಿ ಇರುವ ಕಾರ್ಯ ಪೂರೈಸುವಿರಿ. ಆರೋಗ್ಯವೂ ಸುಸ್ಥಿರ.

ಕುಂಭ
ಸಣ್ಣ ವಿಷಯಗಳನ್ನು ಬಹುವಾಗಿ ಹಿಗ್ಗಿಸದಿರಿ. ಅದು ನಿಮ್ಮ ಶಾಂತಿ ಕದಡುವುದು. ಕೆಲವು ವಿಚಾರ ಕಡೆಗಣಿಸಿದರೇ ನಿಮಗೆ ಒಳಿತು. ಆಪ್ತರಿಂದ ಸಾಂತ್ವನ.

ಮೀನ
ವಿರಾಮದಿಂದ ದಿನ ಕಳೆಯುವ ಉದ್ದೇಶವಿದ್ದರೂ ಕೆಲಸದ ಹೊರೆ ಹೆಚ್ಚುವುದು. ಕೌಟುಂಬಿಕ ಭಿನ್ನಮತ ಸಂಭವ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!